ಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ.

ಗೋಕಾಕ: ತಾಲೂಕಿನ ಮಾಲದಿನ್ನಿ ಮತ್ತು ಉಪ್ಪಾರಹಟ್ಟಿ ಗ್ರಾಮಕ್ಕೆ ಸಮಪರ್ಕ ಕಲ್ಪಿಸುವ ಬ್ರೀಡ್ಜ ಕಂ ಬ್ಯಾರೇಜ ಕಾಮಗಾರಿಗೆ ಸೋಮವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯಿಂದ ಅಂದಾಜು ೨ಕೋಟಿ ರೂಗಳ ವೆಚ್ಚದಲ್ಲಿ ಮಾಲದಿನ್ನಿ ಮತ್ತು ಉಪ್ಪಾರಹಟ್ಟಿ ಗ್ರಾಮಕ್ಕೆ ಸಮಪರ್ಕ ಕಲ್ಪಿಸುವ ಬ್ರೀಡ್ಜ ಕಂ ಬ್ಯಾರೇಜ ಸೇತುವೆ ನಿರ್ಮಾಣ ಮತ್ತು ಉಪ್ಪಾರಹಟ್ಟಿ ಗ್ರಾಮದಿಂದ ಮಮದಾಪೂರ ಕ್ರಾಸ್ ವರೆಗೆ ಜಿಪಂ ಅನುದಾನದಿಂದ ೧.೯೦ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿದೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಮಾನಂದ ಪೂಜಾರಿ, ಮಾಲದಿನ್ನಿ ಗ್ರಾಪಂ, ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸದಸ್ಯರು, ಮಾಲದಿನ್ನಿ ಮತ್ತು ಉಪ್ಪಾರಹಟ್ಟಿ ಗ್ರಾಮದ ಹಿರಿಯರು, ಗ್ರಾಮಸ್ಥರು ಇದ್ದರು.
YuvaBharataha Latest Kannada News