Breaking News

ತುಕ್ಕಾನಟ್ಟಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಹೊರಾಂಗಣ ಶಿಕ್ಷಣ

Spread the love


ಮೂಡಲಗಿ: ಮಹಾಮಾರಿ ಕೊರೊನಾ ವೈರಸ್‍ದಿಂದಾಗಿ ಶಾಲೆಗಳು ತೆರೆಯದೇ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಕೂಡಾ ನಮ್ಮ ಗ್ರಾಮೀಣ ಮಟ್ಟದ ಬಡ ಕುಟಂಬಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಕಾರಣ ಬಡ ಮಕ್ಕಳ ಜನ ವಸತಿ ಪ್ರದೇಶಕ್ಕೆ ಶಿಕ್ಷಕರೇ ಹೋಗಿ ಸಾಮಾಜಿಕ ಅಂತರದಲ್ಲಿ ಬಯಲು ಪ್ರದೇಶದಲ್ಲಿ ಶಿಕ್ಷಣ ನೀಡುತ್ತಿದ್ದೇವೆ ಎಂದು ಮೂಡಲಗಿ ವಲಯದ ತುಕ್ಕಾನಟ್ಟಿಯ ಸರಕಾರಿ ಶಾಲೆಯ ಮುಖ್ಯ ಗುರುಗಳಾದ ಎ.ವ್ಹಿ. ಗಿರೆಣ್ಣವರ ಹೇಳಿದರು.


ಅವರು ತುಕ್ಕಾನಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯಿಂದ ಜನವಸತಿ ಪ್ರಧೇಶಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಶಾಲೆಯಲ್ಲಿ ಸುಮಾರು 700 ವಿದ್ಯಾರ್ಥಿಗಳಿರುವದರಿಂದ ಎಲ್ಲ ಜನವಸತಿ ಪ್ರದೇಶಗಳಲ್ಲಿ ಸುರಕ್ಷಿತ ವಿಧಾನ ಬಳಸಿ, ಶಿಕ್ಷಣ ನೀಡುತ್ತಿದ್ದೇವೆ. ಹೆಚ್ಚಾಗಿ ಬಡ ಹಾಗೂ ಮೊಬೈಲ್ ಪೋನ್ ರಹಿತ ಮಕ್ಕಳನ್ನು ಗಮನದಲ್ಲಿಟ್ಟು ಶಿಕ್ಷಣ ನೀಡುತ್ತೇವೆ ಅಲ್ಲದೇ ಆರೋಗ್ಯ ಹಾಗೂ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹಾಗೂ ಮೋಬೈಲ್ ಫೋನ್ ಲಭ್ಯವಿರುವ ವಿದ್ಯಾರ್ಥಿಗಳ ಗ್ರುಪ್ ಗಳನ್ನಾಗಿ ಮಾಡಿ ವಿದ್ಯರ್ಥಿಗಳಿಗೆ ಆನ್ ಲೈನ್ ಶಿಕ್ಷಣ ನೀಡಲಾಗುತ್ತಿದೆ. ಇದರಲ್ಲಿ ಗ್ರಾಮಸ್ಥರ ಹಾಗೂ ಜನ ಪ್ರತಿನಿಧಿಗಳು ಸಹಕಾರವಿದೆ ಎಂದರು.

ಗ್ರಾಮ ಪಂಚಾಯತ ಮಾಜಿ ಉಪಾದ್ಯಕ್ಷರಾದ ಶಿವಪ್ಪ ಮರ್ದಿ ಮಾತನಾಡಿ, ಎಲ್ಲಾ ಜನವಸತಿ ಪ್ರಧೇಶಗಳಲ್ಲಿ ಮಕ್ಕಳಿಗೆ. ಆರೋಗ್ಯ ದೃಷ್ಟಿಯಿಂಧ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಶಿಕ್ಷಣ ಸಿಗುವಂತೆ ಮಾಡುತ್ತೇವೆ ಎಂದರು.
ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ. ಜೆ.ಕೆ.ಉಪ್ಪಾರ ಮಾತನಾಡಿ, ಕೊರೊನಾ ಆತಂಕದಲ್ಲಿಯೂ ಕೂಡಾ ಮಕ್ಕಳಿಗೆ ಸುರಕ್ಷ್ಷಿತವಾಗಿ ಮಕ್ಕಳಿದ್ದಲ್ಲಿಯೇ ಹೋಗಿ ಶಿಕ್ಷಣ ನೀಡುತ್ತಿರುವದು ಪ್ರಧಾನ ಗುರುಗಳ ಕ್ರಿಯಾಶೀಲತೆಗೆ ಸಾಕ್ಷಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯ ಭರಮಪ್ಪ ಉಪ್ಪಾರ 200 ಮಕ್ಕಳಿಗೆ ಉಚಿತ ಮಾಸ್ಕ ಸ್ಯಾನಿಟೈಜರ ಒದಗಿಸಿದರು,
ಕಾರ್ಯಕ್ರಮದ ಅತಿಥಿಗಳಾಗಿ ಗ್ರಾಪಂ ಮಾಜಿ ಅಧ್ಯಕ್ಷರಾದ ಸಿದ್ದಪ್ಪಾ ಹಮ್ಮನವರ, ಮಾಜಿ ಉಪಾದ್ಯಕ್ಷ ಶಿವಪ್ಪಾ ಮರ್ದಿ, ಮಾಜಿ ಸದಸ್ಯರಾದ ಭರಮಪ್ಪಾ ಉಪ್ಪಾರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ. ಜಿ.ಕೆ.ಉಪ್ಪಾರ,
ಜನ ವಸತಿ ಪ್ರಧೇಶಗಳಲ್ಲಿ ಕಲಿಸುತ್ತಿರುವ ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಶಂಕರ ಲಮಾಣಿ. ಎಸ್.ಆರ್. ಕುಲಕರ್ಣಿ, ಕಿರಣ ಭಜಂತ್ರಿ, ಸಂಗೀತಾ ತಳವಾರ. ಎಮ್.ಕೆ.ಕಮ್ಮಾರ, ಮಹಾದೇವ ಗೋಮಾಡಿ ಉಪಸ್ತಿತರಿದ್ದರು


Spread the love

About Yuva Bharatha

Check Also

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *

15 + 16 =