ಗೋಕಾಕ: ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ೧೦ ಕರೋನಾ ಸೋಂಕು ದೃಢವಾಗಿದೆ ಎಂದು ತಾಲೂಕ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಹೇಳಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರತಿದಿನ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಶನಿವಾರದಂದು ಗೋಕಾಕ ನಗರದಲ್ಲಿ ೨, ಮಮದಾಪುರ ೧, ಅಂಕಲಗಿ ೧, ಅರಬಾಂವಿ ೧, ನಾಗನೂರ ೧, ಸುಲಧಾಳ ೧, ಪಟಗುಂದಿ ೧, ನಲ್ಲಾನಟ್ಟಿ ೧, ಮಲ್ಲಾಪುರ ೧ ಒಟ್ಟು ೧೦ಜನರಿಗೆ ಸೋಂಕು ತಗುಲಿದೆ. ಶನಿವಾರ ಒಂದೇ ದಿನ ೧೨ ಸೋಂಕಿತರು ಗುಣಮುಖರಾಗಿ ಕೋವಿಡ್ ಕೇರ್ ಆಸ್ಪತ್ರೆಯಿಂದ ತೆರಳಿದ್ದಾರೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಮನೆ ಸುತ್ತಮುತ್ತ ಪ್ರದೇಶಗಳನ್ನು ಸಿಲಡೌನ್ ಮಾಡಲಾಗಿದೆ ಎಂದು ಡಾ. ಜಿಂಗಿ ತಿಳಿಸಿದ್ದಾರೆ.

Microscopic view of Coronavirus, a pathogen that attacks the respiratory tract. Analysis and test, experimentation. Sars. 3d render