ಗೋಕಾಕ: ಮರ್ಯಾದಾ ಪುರುಷೋತ್ತಮ ಶ್ರೀರಾಮ ಚಂದ್ರರ ಆದರ್ಶಗಳು ಸರ್ವಕಾಲಕ್ಕೂ ಸರ್ವರಿಗೂ ಆದರ್ಶವಾಗಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಬುಧವಾರದಂದು ನಗರದ ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಪ್ರಭು ಶ್ರೀರಾಮ ಸೇವಾ ಸಮಿತಿಯವರು ಆಯೋಜಿಸಿದ್ದ ಐಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಸಮಾರಂಭದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮವನ್ನು ಶ್ರೀರಾಮ ಚಂದ್ರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಶ್ರೀರಾಮ ಚಂದ್ರರು ದೇಶದ ನೂರಾರು ಕೋಟಿ ಜನರ ಆರಾಧ್ಯ ದೈವವಾಗಿದ್ದಾರೆ. ಅಂತಹ ಮಹಾನ ಪುರುಷರ ಮಂದಿರ ನಿರ್ಮಾಣದ ಶಿಲಾನ್ಯಾಸ ನೇರವೇರುತ್ತಿರುವ ಪುಣ್ಯದಿನ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇಂದು ಅಂತಹ ಮಹಾನ ಕಾರ್ಯವಾಗುತ್ತಿದೆ. ಮಂದಿರ ಬೇಗ ನಿರ್ಮಾಣಗೊಂಡು ನಮಗೆಲ್ಲ ದರ್ಶನ ಸಿಗಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು.
ದಿವ್ಯ ಸಾನಿಧ್ಯವನ್ನು ಬಾಗಲಕೋಟೆಯ ಶ್ರೀ ಪರಮರಾಮಾರೂಢ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆಯ ಮೇಲೆ ಬ್ರಹ್ಮಾನಂದ ಸ್ವಾಮೀಜಿ, ಆರ್.ಎಸ್.ಎಸ್ ಜಿಲ್ಲಾ ಸಂಚಾಲಕ ಎಂ.ವಾಯ್ ಹಾರುಗೇರಿ, ವಿಶ್ವ ಹಿಂದು ಪರಿಷತ್ತಿನ ನಾರಾಯಣಮಠಾಧಿಕಾರಿ, ಪ್ರಭು ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹಾಂತೇಶ ತಾಂವಶಿ, ಪದಾಧಿಕಾರಿಗಳಾದ ಶಾಮಾನಂದ ಪೂಜೇರಿ, ಪ್ರಮೋದ ಜೋಶಿ, ಬಸವರಾಜ ಹೂಳ್ಳೆರ, ರಾಮಚಂದ್ರ ಕಾಕಡೆ, ಭಗವಂತ ಪತ್ತಾರ, ಈಶ್ವರ ಶಿಗಿಹಳ್ಳಿ ಇದ್ದರು.
