||ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ||ಗೋಕಾಕ್ ಫಾಲ್ಸ್..!!
ಯುವ ಭಾರತ ಸುದ್ದಿ ಗೋಕಾಕ : ರಾಜ್ಯದ ಎರಡನೇ ಅತೀ ದೊಡ್ಡ ಜಲಪಾತ ಎಂದು ಕರೆಯುವ ಗೋಕಾಕ್ ಫಾಲ್ಸ್ 180 ಅಡಿಯಷ್ಟು ಎತ್ತರದಿಂದ ನೀರು ಧುಮ್ಮುಕ್ಕಿ ಬೀಳುತ್ತಿರುವ ಗೋಕಾಕ ಜಲಪಾತ ಮಳೆಗಾಲದ ಜೂನ್ ತಿಂಗಳಿಂದ ಡಿಸೆಂಬರ್ ವರೆಗೆ ಬೋರ್ಗರೆಯುತ್ತಾ ಹರಿಯುವ ಈ ಜಲಪಾತ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈ ಜಲಪಾತ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ಜಿಲ್ಲೆ ಬೆಳಗಾವಿಯ ನದಿಗಳು ತುಂಬಿ ಹರಿಯುತ್ತಿದ್ದು. ಮತ್ತೆ ಪ್ರವಾಹಭೀತಿ ಎದುರಾಗಿದೆ. ಅಷ್ಟೇ ಅಲ್ಲದೇ ರಾಜ್ಯದ ಎರಡನೇ ಅತೀ ದೊಡ್ಡ ಜಲಪಾತ ಎಂದು ಕರೆಯುವ ಗೋಕಾಕ್ ಫಾಲ್ಸ್ ನಯನಮನೋಹರವಾಗಿ ಹರಿಯುತ್ತಿದೆ.
ಒಟ್ಟಾರೆ ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ಜಲಪಾತ ತುಂಬಿ ಹರಿಯುತ್ತಿವೆ. ಅಷ್ಟೇ ಅಲ್ಲದೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.