ಗೋಕಾಕ್ -ಲೋಳಸುರ್ ಸೇತುವೆ ಸಂಪೂರ್ಣ ಜಲಾವೃತಗೊಂಡು.. ಸಂಚಾರ ಸ್ಥಗಿತ!!
ಯುವ ಭಾರತ ಸುದ್ದಿ ಗೋಕಾಕ: ಹಿಡಕಲ್ ಜಲಾಶಯದಿಂದ ಹೆಚ್ಚುವರಿಗಾಗಿ 40000 ಕ್ಯೂಸೆಕ್ಸ ನೀರು ಘಟಪ್ರಭಾ ನದಿಗೆ ಹರಿದು ಬಿಟ್ಟಿದ್ದರಿಂದ ಸಂಕೇಶ್ವರ – ನರಗುಂದ ರಾಜ್ಯ ಹೆದ್ದಾರಿ ಲೋಳಸುರ ಸೇತುವೆ ಸಂಪೂರ್ಣ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಬೆಳಗಾವಿ, ವಿಜಯಪುರ, ಸೊಲ್ಹಾಪುರ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ಜಲಾವೃತಗೊಂಡು ಪ್ರಯಾಣಿಕರು ಪರದಾಡುವಂತವಾಗಿದೆ. ಕಳೆದ ವರ್ಷಷ್ಟೇ ಮಹಾಪೂರಕ್ಕೆ ತತ್ತರಿಸಿ ಹೊಗಿದ್ದ ಗೋಕಾಕ ನಗರವು ಈ ಬಾರಿಯು ಕೂಡ ಪ್ರವಾಹ ಭೀತಿ ಎದುರಾಗಿದ್ದು ಘಟಪ್ರಭಾ ನದಿ ದಡದಲ್ಲಿರುವ ಹಾಲಬಾಗ ಗಲ್ಲಿ, ಕುಂಬಾರ ಗಲ್ಲಿ , ಹಳು ಧನಗಳ ಪೇಟೆ, ಮಂಟನ ಮಾರ್ಕೆಟ, ಬೋಜಗಾರ ಗಲ್ಲಿ ಗಳಲ್ಲಿ ನೀರು ನುಗ್ಗಿದೆ. ಪ್ರವಾಹ ಪೀಡಿತ ನಿರಾಶ್ರಿತರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಾಲೂಕಾಡಳಿತ ಸೂಚನೆ ನೀಡಿದ್ದು ಲೋಳಸುರ ಸೇತುವೆ ಬಳಿ ಪೋಲಿಸ ಬಂದುಬಸ್ತ ಒದಗಿಸಲಾಗಿದೆ.