ಮೂಡಲಗಿ : ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮೊದಲು ನಾಡಿನ ಸ್ವಾಂತಂತ್ರ್ಯಕ್ಕಾಗಿ ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಸೇನಾನಿ ಕೆಚ್ಚೇದೆಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆಗೆ ಅವಮಾನ ಮಾಡಿದ ಜೀಲ್ಲಾಡಳಿತ ಕ್ರಮ ಖಂಡಿಸಿ ಹೋರಾಟದ ಮಾರ್ಗ ಹೀಡಿಯಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ಸುರೇಶ ನಾಯ್ಕ ಸರಕಾರವನ್ನು ಒತ್ತಾಯಿಸಿದ್ದಾರೆ.
ಅಗಸ್ಟ 15 ರಂದು ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿದ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ ಪಡಿಸಿದ್ದಲ್ಲದೆ ರಾಷ್ಟ್ರಧ್ವಜಕ್ಕೂ ಅವಮಾನ ಮಾಡಿದ ಘಟಣೆಯನ್ನು ಈ ಮೂಲಕ ಖಂಡಿಸಲಾಗಿದೆ.ಶೀಘ್ರದಲ್ಲಿಯೆ ಮೂರ್ತಿಯನ್ನು ಅದೆ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿದ್ದಾರೆ.ಈ ಘಟಣೆಯ ಬಗ್ಗೆ ಜನಪ್ರತಿನಿಧಿಗಳು,ಹಾಲುಮತದ ಸಂಘಟಣೆಗಳು ಯಾವುದೆ ಪ್ರತಿಕ್ರಿಯೆಯನ್ನು ತೋರಿಸದಿರುವುದು ಇದರಲ್ಲಿ ರಾಜಕೀಯ ಕೈವಾಡ ಇರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.