10 ದಿನದಲ್ಲಿ ಕಳ್ಳತನ ಬೇಧಿಸಿದ- ಸಿಪಿಐ ನಡುವಿನಮನಿ|| ಸಾರ್ವಜನಿಕರ ಮೆಚ್ಚುಗೆ..!!
10 ದಿನದಲ್ಲಿ ಕಳ್ಳತನ ಬೇಧಿಸಿದ- ಸಿಪಿಐ ನಡುವಿನಮನಿ|| ಸಾರ್ವಜನಿಕರ ಮೆಚ್ಚುಗೆ..!!
ಯುವ ಭಾರತ ಸುದ್ದಿ ಸವದತ್ತಿ: ತಾಲೂಕಿನ ಮುನವಳ್ಳಿಯಲ್ಲಿಯ ಕುಟುಂಬ ಒಂದರ ಸದಸ್ಯರು ಕೋವಿಡ್ ಕೇರ್ ಸೆಂಟರನಲ್ಲಿ ಕ್ವಾರಂಟೈನಲ್ಲಿದ್ದ ಸಮಯದಲ್ಲಿ ಅವರ ಮನೆಗೆ ನುಗ್ಗಿ ಕಳುವು ಮಾಡಿದ ಮೂರು ಆರೋಪಗಳನ್ನು ಸಿಪಿಐ ಮಂಜುನಾಥ ನಡುವಿನಮನಿ ನೇತ್ರತ್ವದಲ್ಲಿ ಬಂಧಿಸಿದ್ದಾರೆ.
ಕಳ್ಳತನ ಆರೋಪದ ಹಿನ್ನಲೆಯಲ್ಲಿ ಮುನವಳ್ಳಿಯ ಸದ್ದಾಮಹುಸೇನ ನದಾಫ 24, ಇಸ್ಮಾಯಿಲ್ ದೊಡಮನಿ 32, ಬಸನಿಂಗಪ್ಪ ಕಡಕೋಳ 32 ಬಂದಿತರು. ಅವರಿಂದ 33000 ನಗದು ಸೇರಿದಂತೆ 6.25 ಲಕ್ಷ ರೂಪಾಯಿಗಳ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 31 ರಂದು ಮುನವಳ್ಳಿ ಪಟ್ಟಣದ ಗಾಂಧಿ ನಗರ ನಿವಾಸಿ ಮಹಾಬಲೇಶ್ವರ ಮುನವಳ್ಳಿ ಎಂಬುವರು ಹೃದಯಾಘಾತದಿಂದ ನಿಧನರಗಿದ್ದರು. ಅವರಿಗೆ ಕರೋನಾ ಪಾಸಿಟಿವ್ ಇದ್ದದ್ದು ದೃಡಪಟ್ಟಿದ್ದು ಮನೆಯವರೆಲ್ಲ ಇಲ್ಲಿನ ಮುರಾರ್ಜಿ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರನಲ್ಲಿ ಕ್ವಾರಂಟೈನ ಇದ್ದರು. ಅದೇ ರಾತ್ರಿ ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಅರಿತ ಕಳ್ಳರು ಕಳ್ಳತನ ನಡೆಸಿದ್ದರು.
ಸುರೇಖಾ ಮುನವಳ್ಳಿ ಅವರು ನೀಡಿದ ದೂರಿನ ಮೇರೆಗೆ ಸವದತ್ತಿ ಸಿಪಿಐ ಮಂಜುನಾಥ ನಡುವಿನಮನೆ ಅವರ ನೇತ್ರತ್ವದಲ್ಲಿ ಪಿಎಸ್ ಐ ನಾಗನಗೌಡ ಕಟ್ಟಿಮನಿಗೌಡ್ರ, ಎಮ್ ಜಿ ಮಾರಿಹಾಳ, ಸಿಬ್ಬಂಧಿಗಳಾದ ಬಸವರಾಜ ಹಿರೇಮಠ, ಕೆ ಬಿ ಕಾಂಬಳೆ, ಪಿಎಸ್ ಹೀರೆಹೊಳಿ, ಎಸ್ ಎಮ್ ಜಾಧವ ತನಿಖೆ ನಡೆಸಿ, ಹತ್ತು ದಿನಗಳಲ್ಲಿ ಆರೋಪಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.