ಫಿರಣವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಟಾಪನೆಗೆ ಒತ್ತಾಯಿಸಿ ಸಚಿವ ರಮೇಶ ಜಾರಕಿಹೋಳಿ ಅವರಿಗೆ ಮನವಿ.!
ಯುವ ಭಾರತ ಸುದ್ದಿ ಗೋಕಾಕ್ :ಕರ್ನಾಟಕ ಪ್ರದೇಶ ಕುರುಬರ ಸಂಘ ಮತ್ತು ಹಾಲುಮತ ಮಹಾಸಭಾ ಸಂಘದ ವತಿಯಿಂದ ಫಿರಣವಾಡಿಯಲ್ಲಿ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಟಾಪನೆ ಮಾಡಲು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಅವರಿಗೆ ರವಿವಾರದಂದು ಸಚಿವರ ಗೃಹಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಮಾಜಿ ರಾಜಾದ್ಯಕ್ಷರಾದ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಸಂಗೋಳ್ಳಿ ರಾಯಣ್ಣ ಯಾವುದೇ ಜಾತಿಗೆ, ಭಾಷೆಗೆ ಸೀಮಿತವಾದ ವ್ಯಕ್ತಿಯಲ್ಲ, ರಾಯಣ್ಣ ದೇಶದ ಆಸ್ತಿ, ರಾಯಣ್ಣನ ಮೂರ್ತಿಯ ಪ್ರತಿಷ್ಟಾಪನೆಯನ್ನು ಸೌಹಾರ್ಧಯುತವಾಗಿ ಮಾಡುವಂತೆ ವಿನಂತಿಸಿದರು.
ಮನವಿ ಸ್ವಿಕರಿಸಿ ಮಾತನಾಡಿದ ಸಚಿವ ರಮೇಶ ಜಾರಕಿಹೋಳಿ, ನಾನು ಸಹ ಸ್ವಾತಂತ್ರö್ಯ ಹೋರಾಟಗಾರ ಸಂಗೋಳ್ಳಿ ರಾಯಣ್ಣನ ಅಭಿಮಾನಿ. ಮೂರ್ತಿ ಪ್ರತಿಷ್ಠಾಪಿಸಲು ನನಗೂ ಆಸಕ್ತಿ ಇದೆ. ಸೌಹಾರ್ಧಯುತವಾಗಿ ಮೂರ್ತಿ ಪ್ರತಿಷ್ಠಾಪಿಸಲು ಕ್ರಮ ಕೈಗೋಳ್ಳುತ್ತೇನೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಅಪೇಕ್ಸ್ ಬ್ಯಾಂಕ ನಿರ್ದೇಶಕ ಲಕ್ಷö್ಮಣರಾವ್ ಚಿಂಗಳೆ, ಸಿದ್ಲಲಿಂಗಪ್ಪ ದಳವಾಯಿ, ಕುರುಬರ ಸಂಘದ ಜಿಲ್ಲಾದ್ಯಕ್ಷ ಮಡ್ಡೇಪ್ಪ ತೋಳಿನವರ, ಹಾಲುಮತ ಮಹಾಸಭಾದ ಜಿಲ್ಲಾದ್ಯಕ್ಷ ವಿನಾಯಕ ಕಟ್ಟಿಕರ, ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರಡಿ ಪಿರಣವಾಡಿ ಗ್ರಾಮಸ್ತರಾದ ಮಹೇಶ ಪಾಟೀಲ, ಶಿವಾಜಿ ಶಾಪೂರಕರ, ಬಸವರಾಜ ಬಸಳಿಗುಂದಿ, ಶಂಕರರಾವ್ ಹೆಗಡೆ, ಎಚ್.ಎಸ್ ನಸಲಾಪೂರೆ, ಭಗವಂತ ಬಂತಿ, ಜಿ ಜಿ ಕನವಿ, ಶಿವಪುತ್ರ ಹಡಕರ, ಹನಮಂತ ಗೋರವನಕೋಳ್ಳ, ಸತ್ತೇಪ್ಪ ಭಾಗೇನ್ನವರ, ಶಿವು ಮುರಾಯಿ, ಮದುಸೂದನ ಬೀಳಗಿ, ಸತೀಶ ಶಾಪೂರಕರ, ಎಮ್ ಕೆ ಪೂಜೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.