
ಗೋಕಾಕ: ಮಹಾಮಾರಿ ಕೋರೊನಾ ವೈರಸ್ಸನ್ನು ನಿಯಂತ್ರಿಸಲು ಜನತೆ ಮಾಸ್ಕ ಧರಿಸಿ, ಸಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಇಲ್ಲಿಯ ೧೨ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಕುಮಾರ ಎಮ್ ಎ ಹೇಳಿದರು.
ಅವರು, ಬುಧವಾರದಂದು ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕ ಆರೋಗ್ಯ ಇಲಾಖೆ, ತಾಲೂಕಾಡಳಿತ, ಶಿಕ್ಷಣ ಇಲಾಖೆ ಹಾಗೂ ಎಸ್‌ಎಲ್‌ಜೆ ಕಾನೂನು ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕೋವಿಡ್-೧೯ ಕುರಿತು ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೋವಿಡ್ ನಿಯಂತ್ರಿಸಲು ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡುತ್ತಿದ್ದರು.
ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಢಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯವನ್ನು ದೇಶ ಸೇವೆ ಎಂದು ತಿಳಿದು ಜನರಲ್ಲಿ ಜಾಗೃತಿ ಮೂಢಿಸಿ ಕರೋನ ವೈರಸ್‌ನ್ನು ನಿಯಂತ್ರಿಸಲು ಶ್ರಮಿಸುವಂತೆ ಕರೆ ನೀಡಿಸದರು.
ಈ ಸಂದರ್ಭದಲ್ಲಿ ೧ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸತೀಶ ಬಾಳಿ, ೨ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್ ಚಂದ್ರಪ್ಪ ಹೊನ್ನೂರು, ನ್ಯಾಯವಾದಿ ಸಂಘಗಳ ಅಧ್ಯಕ್ಷ ಯು ಬಿ ಸಿಂಪಿ, ಬಿಇಓ ಜಿ ಬಿ ಬಳಿಗಾರ, ಆರೋಗ್ಯ ಇಲಾಖೆಯ ಡಾ. ಜ್ಯೋತಿಲಕ್ಷಿö್ಮÃ ಅಂಗಡಿ, ಮಲ್ಲವ್ವ ನಾಯಿಕ, ಎಸ್‌ಎಲ್‌ಜೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರತಿಭಾ ಮೋರೆ ಸೇರಿದಂತೆ ಅನೇಕರು ಇದ್ದರು.
YuvaBharataha Latest Kannada News