Breaking News

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ.!

Spread the love

ಯುವ ಭಾರತ ಸುದ್ದಿ, ಗೋಕಾಕ್: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕಾ ಘಟಕ, ಗೋಕಾಕ. ಇದರ ೨೦೨೦-೨೫ ರ ಅವಧಿಗಾಗಿ ಕಾರ್ಯಕಾರಿ ಸಮಿತಿಗೆ ೧೫ ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ಎಮ್.ಕಂಬಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕಾ ಘಟಕ, ಗೋಕಾಕ. ಇದರ ೨೦೨೦-೨೫ರ ಅವಧಿಗಾಗಿ ಜರುಗಿದ ಕಾರ್ಯಕಾರಿ ಸಮಿತಿಯ ಚುನಾವಣೆಯ ಪ್ರಕ್ರಿಯೆ ಈ ಕೆಳಗಿನಂತಿರುತ್ತದೆ.
ಕಾರ್ಯಕಾರಿ ಸಮಿತಿಗೆ ಒಟ್ಟು ಸ್ಥಾನಗಳು-೧೪ (ಸಾಮಾನ್ಯ ಸ್ಥಾನ-೯, ಮಹಿಳಾ ಮೀಸಲಾತಿ-೫) ದಿ.೯ರ ವರೆಗೆ ಸಲ್ಲಿಕೆಯಾದ ಒಟ್ಟು ನಾಮಪತ್ರಗಳು ೧೪ (ಸಾಮಾನ್ಯ ಸ್ಥಾನ-೯, ಮಹಿಳಾ ಮೀಸಲಾತಿ-೫ ಈ ಸ್ಥಾನಗಳಿಗೆ ಒಂದೊAದೆ ನಾಮಪತ್ರ ಸಲ್ಲಿಸಿರುವುದರಿಂದ ೧೪ ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ ರುತ್ತಾರೆಂದು ಘೋಷಿಸಲಾಗಿದೆ.
ಶೋಭಾ ರಾಮಚಂದ್ರ ಯಡ್ರಾಂವಿ, ಸುನಂದಾ ರುದ್ರಪ್ಪ ಡಬರಿ, ಮಹಾದೇವಿ ವಿಠ್ಠಲ ಬಾಗೆನ್ನವರ, ಕವಿತಾ ರಾಮಪ್ಪ ಚೌಗಲೆ, ದಾಕ್ಷಾಯಣಿ ಮಲ್ಲಪ್ಪ ಹುಂಡೇಕಾರ, ಯಾಸೀನ ಮಹಮ್ಮದಲಿ ಸನದಿ, ಮಲ್ಲಪ್ಪ ಯಮನಪ್ಪ ಬಡಿಗೇರ, ಲೋಕನಾಥ ಗಂಗಪ್ಪ ನಾಯ್ಕರ, ಗೌಸಸಾಹೇಬ ಮದಾರಸಾಬ ರಾಜೇಖಾನ, ಹನುಮಂತ ಭೀಮಪ್ಪ ನಾಗಪ್ಪಗೋಳ, ಮಲಿಕಜಾನ ಕುತುಬುದ್ದೀನ ಪಾಟೀಲ, ಅಡಿವೆಪ್ಪಾ ತಿಪ್ಪಣ್ಣ ಮಳಗಲಿ, ನಾಗಪ್ಪ ಭೀಮಪ್ಪ ಬಾಗೈಗೋಳ, ಶಿವಾನಂದ ಚಂದ್ರಪ್ಪ ಹನಮಣ್ಣವರ ಇವರುಗಳು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ಎಮ್.ಕಂಬಳಿ ತಿಳಿಸಿದ್ದಾರೆ.
ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಎಲ್ಲ ಸದಸ್ಯರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

4 × three =