Breaking News

ಗೋಕಾಕ-ಅಥಣಿ ಟ್ರಾಫೀಕ್ ಠಾಣೆಗಳಿಗೆ ಪ್ರಸ್ತಾವನೆ- ಎಸ್ಪಿ ಲಕ್ಷ್ಮಣ ನಿಂಬರಗಿ.!

Spread the love

ಗೋಕಾಕ-ಅಥಣಿ ಟ್ರಾಫೀಕ್ ಠಾಣೆಗಳಿಗೆ ಪ್ರಸ್ತಾವನೆ- ಎಸ್ಪಿ ಲಕ್ಷ್ಮಣ ನಿಂಬರಗಿ.!

ಯುವ ಭಾರತ ಸುದ್ದಿ,  ಗೋಕಾಕ್: ಬೆಳೆಯುತ್ತಿರುವ ತಾಲೂಕು ಕೇಂದ್ರಗಳಾದ ಗೋಕಾಕ ಮತ್ತು ಅಥಣಿಯಲ್ಲಿ ಟ್ರಾಫೀಕ್ ಸಮಸ್ಯೆ ಹೆಚ್ಚಿದ್ದು, ಮುಂಬರುವ ದಿನಗಳಲ್ಲಿ ಟ್ರಾಫೀಕ್ ಪೋಲಿಸ ಠಾಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಗೋಕಾಕದಲ್ಲಿ ಟ್ರಾಫೀಕ್ ಸಮಸ್ಯೆ ಪರಿಹರಿಸಲು ಟ್ರಾಫೀಕ್ ಪೋಲಿಸ ಠಾಣೆಯ ಅಗತ್ಯವಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ಅವರು, 112 ಇಆರ್‌ಎಸ್‌ಎಸ್ ತುರ್ತು ಸ್ಫಂದನಾ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ, ಗೋಕಾಕ ನಗರದಲ್ಲಿ ಟ್ರಾಫೀಕ್ ಪೋಲಿಸ್ ಠಾಣೆಗೆ ಬೇಡಿಕೆ ಇಟ್ಟಿದ್ದು ಸರಕಾರದ ಅನುಮತಿ ಪಡೆದು ಟ್ರಾಫೀಕ್ ಠಾಣೆ ಪ್ರಾರಂಭಿಸಲಾಗುವದು. ಅಪರಾಧ ಕೃತ್ಯಗಳನ್ನು ತಡೆಗಟ್ಟಲು, ಗೋಕಾಕ ನಗರದಲ್ಲಿ ಸಿಪಿಐ ಹುದ್ದೆ ಸೃಷ್ಟಿಸಿದ್ದು ನಗರದಲ್ಲಿ ನೂತನ ಸಿಪಿಐ ಕಾರ್ಯನಿರ್ವಹಿಸಲಿದ್ದಾರೆ.

ಯಾವುದೇ ಅವಘಡಗಳು ಸಂಭವಿಸಿದಾಗ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ಸಹಾಯಪಡೆಯಬಹುದು. ತುರ್ತುವಾಹನಗಳ ಮೂಲಕ ಕಡಿಮೆ ಸಮಯದಲ್ಲಿ ನಿವಿರುವ ಸ್ಥಳಕ್ಕೆ ಪೋಲಿಸ್ ಸಿಬ್ಬಂಧಿ ತಲುಪುತ್ತಾರೆ. ಇದರಿಂದ ಅಪರಾಧಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಠಾಣೆಯ ಸಹಾಯಕ್ಕಾಗಿ, ಅಗ್ನಿ ಅವಘಡ ಸೇರಿದಂತೆ ವಿಪತ್ತುಗಳು ಉಂಟಾದ ಸಂದರ್ಭದಲ್ಲಿ ಈ ಎಲ್ಲ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ 112 ಸಂಖ್ಯೆಗೆ ಡಯಲ್ ಮಾಡಿದರೆ 15 ಸೆಕೆಂಡುಗಳಲ್ಲಿ ತಮ್ಮ ಕರೆಗೆ ಸ್ಫಂದನೆ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಗೋಕಾಕ ಡಿವೈಎಸ್‌ಪಿ ಜಾವೇದ ಇನಾಮದಾರ, ಸಿಪಿಐಗಳಾದ ಗೋಪಾಲ ರಾಠೋಡ, ಶ್ರೀಶೈಲ ಬ್ಯಾಕೂಡ, ವೆಂಕಟೇಶ ಮುರನಾಳ, ಪಿಎಸ್‌ಐಗಳಾದ ನಾಗರಾಜ ಖಿಲಾರೆ, ಎಚ್ ಎಸ್ ಬಾಲದಂಡಿ, ಬಿ ಕೆ ವಾಲಿಕಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಇದ್ದರು.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

2 × 4 =