ಶ್ರೀ ಬಾಳಯ್ಯ ಮಹಾಸ್ವಾಮಿಜಿಯವರ 18ರಂದು ಶಿವರಾತ್ರಿ ಜಾತ್ರಾ ಮಹೋತ್ಸವ.!
ಯುವ ಭಾರತ ಸುದ್ದಿ, ಗೋಕಾಕ್: ತಾಲೂಕಿನ ಪಂಚ ಮಠಗಳಲ್ಲಿ ಒಂದಾದ ತವಗ ಮಠದ ಶ್ರೀ ಬಾಳಯ್ಯ ಮಹಾಸ್ವಾಮಿಜಿಯವರ ಶಿವರಾತ್ರಿ ಜಾತ್ರಾ ಮಹೋತ್ಸವ ಇದೆ ದಿ.18 ಹಾಗೂ ದಿ.19 ರಂದು ಅತಿ ವಿಜೃಂಭಣೆಯಿದ ಜರುಗಲಿದೆ.
ಗುರುವಾರ ದಿ.18 ರಂದು ಕರ್ತೃ ಗದ್ದುಗೆಗೆ ಪುಜಾಭಿಷೇಕ, ರಾತ್ರಿ 1೦ಗಂಟೆಗೆ ಸಕಲ ವಾದ್ಯ ಮೇಳಗಳೊಂದಿಗೆ ದೇವರುಗಳನ್ನು ಕರೆ ತರುವದು. ಶುಕ್ರವಾರ ದಿ.19 ರಂದು ಮುಂಜಾನೆ 1೦ ಗಂಟೆಗೆ ಪ್ರಸಾದ ಪೂಜೆಯೊಂದಿಗೆ “ಮಹಾದಾಸೋಹ” ಪ್ರಾರಂಭವಾಗುವದು. ಮಧ್ಯಾಹ್ನ 2ಗಂಟೆಗೆ ಪಂಚಮ ಪೀಠಾಧಿಕಾರಿ ಬ್ರಹ್ಮಶ್ರೀ ಸಿದ್ಧಲಿಂಗಯ್ಯ ಮಹಾಸ್ವಾಮಿಗಳವರ ತುಲಾಭಾರ ನೇರವೆರುವದು. ಸಾಯಂಕಾಲ 5ಗಂಟೆಗೆ ನುಡಿ ಆಗುತ್ತವೆ. ರಾತ್ರಿ 1೦ಗಂಟೆಗೆ ಬೈಲಾಟ ಜರುಗಲಿವೆ ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.
