ನಲ್ಲಾನಟ್ಟಿನಲ್ಲಿ ಅನುಮತಿ ಇಲ್ಲದೆ ಮದುವೆಗೆ 20.000/-ದಂಡ!!

ಯುವ ಭಾರತ ಸುದ್ದಿ, ಗೋಕಾಕ : ತಾಲೂಕಿನ ನಲ್ಲಾನಟ್ಟಿ ಗ್ರಾಮದಲ್ಲಿ ನಿನ್ನೆ ರವಿವಾರ ದಿ.31 ರಂದು ಅನುಮತಿ ಇಲ್ಲದೇ ಮದುವೆ ಸಮಾರಂಭ ಜರುಗಿಸಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 20,000/- ರೂಪಾಯಿಗಳ ದಂಡ ವಿಧಿಸಲಾಗಿದೆ.
ನಲ್ಲಾನಟ್ಟಿ ಗ್ರಾಮದ ದಶರಥ ಯಶವಂತ ಪಾಟೀಲ ಎನ್ನುವವರು ಮದುವೆ ಸಮಾರಂಭವನ್ನು ಆಯೋಜಿಸಿದ್ದು ತಿಳಿದು ಬಂದಿದ್ದು, ಕೂಡಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಮತ್ತು ಘಟಪ್ರಭಾ ಠಾಣೆಯ ಆರಕ್ಷಕ ನಿರೀಕ್ಷಕರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ದಂಡ ವಿಧಿಸಿ ಜನರನ್ನು ತೆರವುಗೊಳಿಸಿದ್ದಾರೆ. ಇಂತಹ ಉಲ್ಲಂಘನೆಗಳು ಜರುಗದಂತೆ ಎಲ್ಲ ಸಾರ್ವಜನಿಕರು ಲಕ್ಷ ವಹಿಸತಕ್ಕದ್ದು ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
YuvaBharataha Latest Kannada News