ಚಿರತೆಯನ್ನು ದತ್ತು ಪಡೆದ- ಗುರು ಮೆಟಗುಡ್ಡ!!
ಯುವ ಭಾರತ ಸುದ್ದಿ, ಗೋಕಾಕ: ನಟ ದರ್ಶನ್ ಕೊರೊನಾ ಕಾಲಘಟ್ಟದಲ್ಲಿ ಜನರಂತೆ ಪ್ರಾಣಿ-ಪಕ್ಷಿಗಳು ಕೂಡ ಸಂಕಷ್ಟದಲ್ಲಿವೆ ಅವುಗಳನ್ನು ಸಾಧ್ಯವಾದಷ್ಟು ದತ್ತು ಪಡೆಯಿರಿ ಎನ್ನುವ ವಿಚಾರವನ್ನು ಮಾಧ್ಯಮಗಳಲ್ಲಿ ಪ್ರಸ್ತಾಪಿಸಿದ್ದಾರೆ. ಸೆಲೆಬ್ರಿಟಿಗಳು ಏನಾದರೂ ಒಂದು ಉತ್ತಮ ಕಾರ್ಯ ಮಾಡಿದಾಗ ಅದನ್ನು ಅನುಕರಣೆ ಮಾಡುವವರು ಮತ್ತು ಅವರಂತೆ ನಡೆದುಕೊಳ್ಳುವವರು ತುಂಬಾ ಜನರಿದ್ದಾರೆ. ಅದರಂತೆ ನಟ ದರ್ಶನ್ ಅವರ ಪ್ರಾಣಿ ಪ್ರೀತಿ ಮತ್ತು ಪರಿಸರ ಕಾಳಜಿಯಿಂದ ಪ್ರೇರಣೆಗೊಳಗಾದ ಬಿಜೆಪಿ ಮುಖಂಡ ಗುರು ಮೆಟಗುಡ್ಡರವರು ಚಿರತೆ ದತ್ತು ಪಡೆಯುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಬೆಳಗಾವಿಯ ತಾಲೂಕಿನ ಕಾಕತಿ ಹೊರವಲಯದಲ್ಲಿರುವ ಭೂತರಾಮನಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದ ಚಿರತೆ ಅರ್ಜುನನ್ನು ಬೈಲಹೊಂಗಲದ ಬಿಜೆಪಿ ಮುಖಂಡ ಗುರು ಮೆಟಗುಡ್ಡರವರು ಶುಕ್ರವಾರದಂದು ಒಂದು ವರ್ಷದ ಅವಧಿಯ ವರೆಗೆ ದತ್ತು ಸ್ವೀಕಾರ ಮಾಡಿದ್ದಾರೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಮ್ ವಿ ಅಮರನಾಥ ಅವರು ಅರ್ಜುನ ಚಿರತೆಯನ್ನು ದತ್ತು ಪಡೆದ ಮೆಟಗುಡ್ಡ ಅವರಿಗೆ ಪ್ರಮಾಣ ಪತ್ರ ವಿತರಿಸಿದ್ದಾರೆ.
ಸಾರ್ವಜನಿಕರು, ವನ್ಯ ಪ್ರೇಮಿಗಳು, ಉದ್ಯಮಿಗಳು, ಆರ್ಥಿಕವಾಗಿ ಸದೃಢರಾಗಿರುವವರು ಭೂತರಾಮನಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದ ವನ್ಯ ಪ್ರಾಣಿಗಳು ದತ್ತು ಸ್ವೀಕಾರಕ್ಕೆ ಮುಂದೆ ಬರಬೇಕು ಎಂದು ಪ್ರಾಣಿ ಸಂಗ್ರಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಮ್ ವಿ ಅಮರನಾಥ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಡಿ. ಶಿವಕುಮಾರ್, ರಾಕೇಶ್ ಅರ್ಜುನವಾಡ, ಪರಿಸರ ಪ್ರೇಮಿ ದಯಾನಂದ ಪರಾಳಶೆಟ್ಟರ್ ಉಪಸ್ಥಿತರಿದ್ದರು.