ಜನಪ್ರತಿನಿಧಿಗಳಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ರಾಯಣ್ಣ ಭಾವಚಿತ್ರ ವಿತರಣೆ.!
ಯುವ ಭಾರತ ಸುದ್ದಿ ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನ ಅಗಸ್ಟ-15 ರಂದು ಹಾಗೂ ಹುತಾತ್ಮರಾದ ದಿನ ಜನೇವರಿ-26 ರಂದು ಸ್ಮರಣಾರ್ಥವಾಗಿ ರಾಜಧಾನಿಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗೌರವ ಸೂಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ -13/೦6/2021 ರಂದು ಆದೇಶ ಮಾಡಿರುತ್ತದೆ.
ಅದರಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರಿಗೆ ಸಲ್ಲಿಸಬೇಕಾದ ಗೌರವವನ್ನು ಎಲ್ಲಾ ಕಛೇರಿಗಳಲ್ಲಿ, ಶಾಲೆ/ಕಾಲೇಜುಗಳಲ್ಲಿ ಗೌರವಯುತವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದ್ದು, ಈ ಕುರಿತು ಶ್ರೀ ಅಶೋಕ ಸದಲಗಿ ನಿವೃತ್ತ ಪೊಲೀಸ್ ಅಧೀಕ್ಷಕರು ಹಾಗೂ ಅದ್ಯಕ್ಷರು ಕನಕ ನೌಕರರ ಸಂಘ ಬೆಳಗಾವಿ ನಿಯಮಿತ ಹಾಗೂ ನಿದೇಶಕ ಮಂಡಳಿ ಹಾಗೂ ನಗರ ಪೊಲೀಸ ಸಿಬ್ಬಂದಿಗಳನ್ನೊಳಗೊಂಡತೆ ಹೆಚ್ಚಿನ ಜಾಗೃತಿಗೊಳಿಸುವ ಸಲುವಾಗಿ ಜಿಲ್ಲಾ ಮಟ್ಟದ ಅಧೀಕಾರಿಗಳಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವ ಚಿತ್ರಗನ್ನು ಈ ದಿವಸ ದಿನಾಂಕ 24/೦1/2022 ರಂದು ವಿತರಿಸಲಾಗಿದ್ದು,
ಜಿಲ್ಲಾಧೀಕಾರಿಗಳು ಬೆಳಗಾವಿ ಜಿಲ್ಲೆ ರವರಿಗೆ ಹಾಗೂ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಹಾಗೂ ಸತೀಶ ಜಾರಕಿಹೊಳಿ ಶಾಸಕರು ಯಮಕನಮರಡಿ ಕ್ಷೇತ್ರ ಹಾಗೂ ಕಾಗ್ರೇಸ್ ಹಿರಿಯ ನಾಯಕರ ಸಮ್ಮಖದಲ್ಲಿ ವಿತರಿಸಲಾಯಿತು.