Breaking News

ಮೂರು ರಾಜ್ಯಗಳಲ್ಲಿ ರಮೇಶ ಜಾರಕಿಹೊಳಿ ಹವಾ.!

Spread the love

ಕರ್ನಾಟಕವಷ್ಟೇಯಲ್ಲ ಮಹಾರಾಷ್ಟ್ರ ಮತ್ತು ಗೋವೆಯಲ್ಲೂ ಸಾಹುಕಾರ್ ಹವಾ.!

ವಿಶೇಷ ವರದಿ: ಸತೀಶ್ ಮನ್ನಿಕೇರಿ

ಯುವ ಭಾರತ ಸುದ್ದಿ  : ಬೆಳಗಾವಿ ಜಿಲ್ಲೆಗೆ ಸಮೀದಲ್ಲಿರುವ ಮಹಾರಾಷ್ಟç ಹಾಗೂ ಗೋವಾ ರಾಜ್ಯಗಳ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು, ಗೋವಾ ಚುನಾವಣೆಯಲ್ಲಿ ಸಕ್ರೀಯರಾಗಿ, ಹೈಕಮಾಂಡ್‌ಗೆ ಮತ್ತಷ್ಟೂ ಹತ್ತಿರವಾಗುತ್ತಲಿದ್ದಾರೆ.
ಹೌದು ಬುಧವಾರದಂದು ಗೋವಾದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರದ ಗೃಹ ಸಚಿವ ಅಮೀತ್ ಶಾ ಅವರನ್ನು ನಮಸ್ಕರಿಸಿದಾಗ ನಗುಮುಖದಿಂದಲೇ ಆತ್ಮೀಯವಾಗಿ ಮಾತನಾಡಿದ ಅಮೀತ್ ಶಾ ಸಾಹುಕಾರ್‌ಗೆ ಮಂತ್ರಿಯಾಗುವ ಸಿಗ್ನಲ್ ಸ್ಮಾಯಿಲ್‌ನಲ್ಲೇ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.


ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಗೋವಾದಲ್ಲಿ ರಮೇಶ ಜಾರಕಿಹೊಳಿ ಸ್ವಾಗತಿಸಿದ್ದಾರೆ. ಗೋವಾ ರಾಜ್ಯದ ಚುನಾವಣೆ ಪ್ರಚಾರಕ್ಕಾಗಿ ದೆಹಲಿಯಿಂದ ಆಗಮಿಸಿದರು. ಈ ವೇಳೆ ನಗುಮುಖದಿಂದಲೇ ಶಾ ರಮೇಶ ಜಾರಕಿಹೊಳಿ ಜತೆಗೆ ಶಾ ಮಾತನಾಡಿದ್ರು. ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿಯಾಗಿದ್ದ ಜಾರಕಿಹೊಳಿ ಈಗ ಶಾ ಜತೆಗೆ ಚರ್ಚೆ ನಡೆಸಿದ್ದಾರೆ. ಈ ಮೂಲಕ ಸಂಪುಟ ಪುನಾರಚನೆ ವೇಳೆಯಲ್ಲಿ ಮಂತ್ರಿಯಾಗೋದು ಫಿಕ್ಸ್ ಆಗಿದೆ.ಎಂದು ಹೇಳಲಾಗುತ್ತಿದೆ.
ಸಿಡಿ ಪ್ರಕರಣ ಸಂಬAಧ ಇತ್ತೀಚಿನ ಕೋರ್ಟ್ನಲ್ಲಿ ರಮೇಶ ಜಾರಕಿಹೊಳಿಗೆ ಸ್ವಲ್ಪ ರೀಲಿಫ್ ಸಿಕಿತ್ತು. ಈ ಬೆನ್ನಲ್ಲೆ ಮತ್ತೆ ಯಾಕ್ಟಿವ್ ಆಗಿರೋ ರಮೇಶ ಜಾರಕಿಹೊಳಿ ಸಚಿವ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ದೇವೇಂದ್ರ ಫಡ್ನವಿಸ್ ಹಾಗೂ ಈಗ ಅಮಿತ್ ಭೇಟಿ ಮಾಡಿದ್ದಾರೆ.
ರಮೇಶ ಜಾರಕಿಹೊಳಿ ಹಾಗೂ ಶಾ ಭೇಟಿ ಸಂದರ್ಭದಲ್ಲಿ ಗೋಕಾಕ್ ಗ್ಲಾಸ್ ಬ್ರಿಡ್ಜ್ ಶಂಕುಸ್ಥಾಪನೆ ಆಹ್ವಾನ ನೀಡಿದ್ದಾರೆ. ಗೋವಾದಲ್ಲೇ ವಾಸ್ತವ್ಯ ಮಾಡಿರುವ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ ಅಮೀತ ಶಾ ಅವರೊಂದಿಗೂ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಈ ವೇಳೆಯಲ್ಲಿ ಗೋವಾ ಸಿಎಂ ಪ್ರಮೋದ ಸಾವಂತ, ಮತ್ತು ಬೆಳಗಾವಿಯ ಬಿಜೆಪಿ ಮುಖಂಡ ಕಿರಣ್ ಜಾಧವ್ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

9 + 12 =