ಆತ್ಮಹತ್ಯೆ ಕೇಸ್ ಹಿಂದೆಯೂ ಮಹಾ ನಾಯಕ ಇದ್ದಾನೆ-ರಮೇಶ್ ಜಾರಕಿಹೊಳಿ!!

ಯುವ ಭಾರತ ಸುದ್ದಿ ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು ಸೋಮವಾರ 11 ಗಂಟೆಗೆ ಸುದ್ದಿಗೋಷ್ಠಿ ಮಾಡಿ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಮೃತ ಸಂತೋಷ್ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸಂತೋಷ್ ಪಾಟೀಲ ನನ್ನ ಹಳೆಯ ಕಾರ್ಯಕರ್ತ. ಈ ಕೇಸ್ ಹಿಂದೆಯೂ ಮಹಾ ನಾಯಕ ಇದ್ದಾನೆ. ನನ್ನ ಸಿಡಿ ಕೇಸ್ ನಲ್ಲಿದ್ದ ಮಹಾ ನಾಯಕನ ತಂಡ ಸಂತೋಷ ಕೇಸ್ ನಲ್ಲೂ ಇದೆ ಎಂದು ಹೊಸ ಬಾಂಬ್ ಹಾಕಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆಯನ್ನು ಹಾಗೂ ನನ್ನ ಸಿಡಿ ಕೇಸ್ ಸಿಬಿಐ ಗೆ ಒಪ್ಪಿಸಬೇಕು ಎಂದು ಆಗ್ರಹ ಮಾಡುತ್ತೇನೆ. ಎರಡು ಕೇಸ್ಗಳನ್ನು ಸಿಬಿಐಗೆ ಕೊಟ್ಟರೆ ಕೇಸ್ ಹಿಂದೆಯೂ ಯಾವ ಮಹಾ ನಾಯಕರಿದ್ದಾರೆ ಬೆಳಕಿಗೆ ಬರ್ತಾರೆ. ನನ್ನ ಸಿಡಿ ಕೇಸ್ನಲ್ಲಿ ಇದ್ದ ಮಹಾ ನಾಯಕನ ತಂಡವೇ ಸಂತೋಷ ಕೇಸ್ನಲ್ಲೂ ಇದೆ. ಈ ಸಮಯದಲ್ಲಿ ಹೆಸರು ಹೇಳುವುದು ಬೇಡ. ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿ ಒಪ್ಪಿಗೆ ಸೂಚಿಸಿದರೇ ಸೋಮವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತೇನೆ. ನಾನು ಕಳೆದ ಒಂದು ವರ್ಷದಿಂದ ವಿನಾಕರಣ ಆರೋಪ ಎದುರಿಸಿ ನೋವು ತಿಂದಿದ್ದೇನೆ, ಆದ್ದರಿಂದ ಈಶ್ವರಪ್ಪ ಅವರು ರಾಜೀನಾಮೆ ನೀಡೋದು ಬೇಡ. ಕಾನೂನಿನ ಅನ್ವಯ ತನಿಖೆ ಆಗಲಿ, ಅವರ ತಪ್ಪಿದ್ದರೇ ಶಿಕ್ಷೆ ಆಗಲಿ ಎಂದು ಹೇಳಿದರು.
YuvaBharataha Latest Kannada News