Breaking News

ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.

Spread the love

ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.


ಗೋಕಾಕ : ಸಮೀಪದ ಅರಭಾವಿ ಸತ್ತಿಗೇರಿ ತೋಟದ ಮಸೀದಿ ಹತ್ತಿರ ಕೆಲ ಕಿಡಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿದ್ದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಿಬ್ಬಂದಿಗಳ ಮೂಲಕ ಸತ್ತಿಗೇರಿ ತೋಟದ ಉಭಯ ಸಮುದಾಯಗಳ ಸಭೆ ನಡೆಸುವ ಮೂಲಕ ಯಶಸ್ವಿಯಾಗಿ ಸಂಧಾನ ನಡೆಸಿದ್ದಾರೆ.
ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅಲ್ಲಿನ ನಿವಾಸಿಗಳ ಸಭೆ ನಡೆಸಿ ತಪ್ಪಿತಸ್ಥರು ಯಾರೇ ಆಗಿರಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಉಭಯ ಸಮುದಾಯಗಳ ಮುಖಂಡರುಗಳು ಸಭೆಯಲ್ಲಿ ಹೇಳಿದರು.
ಮುಸ್ಲಿಂ ಸಮಾಜದ ಮುಖಂಡ ಮಲೀಕಸಾಬ ಹುಣಶ್ಯಾಳ ಮತ್ತು ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕ ಕೆಂಚಪ್ಪ ಮಂಟೂರ ಮಾತನಾಡಿ, ನಿನ್ನೆ ರಾತ್ರಿ ಕೆಲ ಕಿಡಗೇಡಿಗಳು ಉದ್ಧೇಶಪೂರ್ವಕವಾಗಿಯೇ ಸಮಾಜ-ಸಮಾಜಗಳ ಮಧ್ಯ ಸುಮಧುರ ಭಾವನೆಗಳನ್ನು ಕೆಡಿಸಲು ಇಂತಹ ಅಹಿತಕರ ಘಟನೆ ನಡೆಸಿದ್ದಾರೆ. ನಮ್ಮ ಅರಭಾವಿ ಮತಕ್ಷೇತ್ರ ಮೊದಲಿನಿಂದಲೂ ಶಾಂತಿಗೆ ಹೆಸರುವಾಸಿಯಾಗಿದೆ. ಎಲ್ಲ ಸಮಾಜಗಳು ಪರಸ್ಪರ ಅಣ್ಣ-ತಮ್ಮಂದಿರರAತೆ ಬದುಕುತ್ತಿದ್ದಾರೆ. ನಮ್ಮಲ್ಲಿ ಯಾವುದೇ ವೈಮನಸ್ಸುಗಳಿಲ್ಲ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ವ ಜನಾಂಗದ ಶಾಂತಿಯನ್ನು ಜಪಿಸುತ್ತ ಎಲ್ಲರನ್ನು ಒಂದಾಗಿ ನೋಡುತ್ತಿದ್ದಾರೆ. ಆದರೆ, ಕೆಲವರು ಇದರಲ್ಲಿ ಹುಳಿ ಹಿಂಡುವ ಕೆಲಸವನ್ನು ಮಾಡುವ ಮೂಲಕ ನಮ್ಮ ನಮ್ಮಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಘಟನೆಯನ್ನು ನಾವೇನೂ ಗಂಭೀರವಾಗಿ ಪರಿಗಣಿಸಿಲ್ಲ. ತಪ್ಪಿತಸ್ಥರನ್ನು ಕಂಡು ಹಿಡಿದು ಅವರಿಗೆ ಶಿಕ್ಷೆ ನೀಡುವಂತೆ ನಾವು ಒಕ್ಕೋರಲಿನಿಂದ ಪೊಲೀಸ್ ಇಲಾಖೆಯವರನ್ನು ಕೋರುತ್ತಿದ್ದೇವೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಲಕ್ಕಪ್ಪ ಲೋಕುರಿ, ಮುಖಂಡರಾದ ಮಹ್ಮದಸಾಬ ನದಾಫ, ರಿಯಾಜ ಯಾದವಾಡ, ಕುತಬುದ್ದೀನ ನದಾಫ, ಹುಸೇನ ನದಾಫ, ಮಲಿಕಜಾನ್ ನದಾಫ್, ಇಕ್ಬಾಲ್ ಸರ್ಕಾವಸ್, ಯಲ್ಲಪ್ಪ ಅರಭಾವಿ, ಹನಮಂತ ನಂದಿ, ರಮೇಶ ನಾಗನೂರಿ, ಬಸವರಾಜ ಶೀಳನವರ, ಪರಶುರಾಮ ಸಂಪಗಾAವಿ, ಇಸ್ಮಾಯಿಲ ನದಾಫ, ಹನಮಂತ ಗುಜನಟ್ಟಿ, ಸಲೀಂ ನದಾಫ, ಬಸವರಾಜ ಬಳವನಕಿ, ಇಮಾಮಸಾಬ ನದಾಫ, ದುಂಡಪ್ಪ ಬಡಲಕ್ಕನವರ, ರಮಜಾನ ನದಾಫ, ರಮೇಶ ಮುಶಪ್ಪಗೋಳ, ಮಡಿವಾಳಪ್ಪ ಮಡಿವಾಳ, ಮೈಬೂಬ ನದಾಫ, ಮುಂತಾದವರು ಭಾಗವಹಿಸಿದ್ದರು.
ಕೋಟ್ : ಕಳೆದ ೧೮ ವರ್ಷಗಳಿಂದ ಅರಭಾವಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಇಂತಹ ಘಟನೆಗಳು ನಡೆದಿರುವುದು ವಿರಳ. ಎಲ್ಲ ಧರ್ಮಿಯರೂ ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬದುಕುತ್ತಿದ್ದಾರೆ. ಹಿಂದೂ-ಮುಸ್ಲಿA ಎಂಬ ಬೇಧ-ಭಾವಗಳು ಕೂಡ ನಮ್ಮಲ್ಲಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ತಪ್ಪಿತಸ್ಥರಿಗೆ ಯಾವುದೇ ಮುಲಾಜಿಲ್ಲದೇ ಶಿಕ್ಷೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ.
ಬಾಲಚಂದ್ರ ಜಾರಕಿಹೊಳಿ, ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

18 − 6 =