ಎಲ್‌ಐಎಸ್ ಅಕಾಡೆಮಿಯೊಂದಿಗೆ ವಿಟಿಯು ಆರಂಭಿಸಿರುವ 6 ನೂತನ ಸಂಜೆ ಕೋರ್ಸ್‌ಗಳ ಚಾಲನೆಯಲ್ಲಿ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಸಲಹೆ!!
Yuva Bharatha
June 2, 2022
Uncategorized
220 Views
ತಾಂತ್ರಿಕ ಕೋರ್ಸ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಲ್‌ಐಎಸ್ ಅಕಾಡೆಮಿಯೊಂದಿಗೆ ವಿಟಿಯು ಆರಂಭಿಸಿರುವ 6 ನೂತನ ಸಂಜೆ ಕೋರ್ಸ್‌ಗಳ ಚಾಲನೆಯಲ್ಲಿ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಸಲಹೆ!!
ಯುವ ಭಾರತ ಸುದ್ದಿ ಬೆಳಗಾವಿ: ಈಗ ಅಂತರ್ಜಾಲ ಆಧಾರಿತ, ಇ-ಸೋರ್ಸ್‌ಗಳು ಹೆಚ್ಚಾಗಿ ಬಳಕೆಯಾಗುತ್ತಿದ್ದು, ಎಲ್ಲ ಗ್ರಂಥಪಾಲಕರು ತಾಂತ್ರಿಕ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಗ್ರಂಥಪಾಲಕರು ಕೂಡ ತಮ್ಮ ತಾಂತ್ರಿಕ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು. ಅದಕ್ಕಾಗಿ ಇಂತಹ ತಾಂತ್ರಿಕ ಕೋರ್ಸ್‌ಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಹೇಳಿದರು.
ಗ್ರಂಥಾಲಯ ವೃತ್ತಿಪರರ ಕೌಶಲ್ಯವರ್ಧನೆ ಮತ್ತು ವೃತ್ತಿ ಪ್ರಾವೀಣ್ಯತೆಗಾಗಿ ಎಲ್‌ಐಎಸ್ ಅಕಾಡೆಮಿಯೊಂದಿಗೆ ವಿಟಿಯು ಆರಂಭಿಸಿರುವ ೬ ನೂತನ ಸಂಜೆ ಕೋರ್ಸ್‌ಗಳಿಗೆ ಮಂಗಳವಾರ ಚಾಲನೆ, ಮೊದಲ ತಂಡಕ್ಕೆ ಶುಭ ಕೋರಿ ಮಾತನಾಡಿದ ಅವರು, ಗ್ರಂಥಾಲಯಗಳೆಂದರೆ ಕೇವಲ ಪುಸ್ತಕಗಳು ಮಾತ್ರ ಇರುವುದಿಲ್ಲ. ಈ ಮೊದಲು ಗ್ರಂಥಾಲಯವೆಂದರೆ ಕೇವಲ ಪುಸ್ತಕಗಳಿರುತ್ತಿದ್ದವು. ಆದರೀಗ ಗ್ರಂಥಾಲಯದ ಪರಿಕಲ್ಪನೆ ಹೋಗಿದೆ. ಪ್ರಸ್ತುತ ತಂತ್ರಜ್ಞಾನಕ್ಕೆ ಹೆಚ್ಚು ಬೆಲೆ ಇರುವುದರಿಂದ ಗ್ರಂಥಪಾಲಕರು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಹಾಗೂ ಓದುಗರು ಕೂಡ ಈಗ ಪುಸ್ತಕದ ಬದಲಾಗಿ ಇ-ಸೋರ್ಸ್‌ಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಜಗತ್ತಿನ ವೇಗಕ್ಕೆ ತಕ್ಕಂತೆ ಎಲ್ಲರೂ ಓಡಲು ಸಾಧ್ಯವಾಗುವುದಿಲ್ಲ. ಆದರೆ, ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಕೂಡ ಬದಲಾವಣೆಯಾಗಬೇಕಾದ ಅನಿವಾರ್ಯತೆ ಈಗಿನ ಸಂದರ್ಭದಲ್ಲಿ ಬಂದು ನಾವು ನಿಂತಿದ್ದೇವೆ. ಈ ಹಿನ್ನೆಲೆಯಲ್ಲಿ ಗ್ರಂಥಪಾಲಕರು ಕೇವಲ ಒಂದೇ ರೀತಿಯ ತಂತ್ರಜ್ಞಾನ ಅಳವಡಿಸಿಕೊಳ್ಳದೆ, ನವೀಕರಣವಾಗುವ ಪ್ರತಿಯೊಂದು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬೆಂಗಳೂರು ಎಲ್‌ಐಎಸ್ ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರ ಮಾತನಾಡಿ, ವಿಟಿಯು ಸಹಯೋಗದೊಂದಿಗೆ ಎಲ್‌ಐಎಸ್ ಅಕಾಡೆಮಿಯು ಆರಂಭಿಸಿರುವ ೬ ಸಂಜೆ ಕೋರ್ಸ್‌ಗಳು ಗ್ರಂಥಪಾಲಕರಿಗೆ ಅತ್ಯುಪಯುಕ್ತವಾಗಿವೆ. ಗ್ರಂಥಾಲಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗಾಗಿಯೇ ದೇಶದ ನಾನಾ ತಂತ್ರಜ್ಞರನ್ನು ಒಳಗೊಂಡ ತಂಡವು ಕೋರ್ಸ್‌ಗಳ ರೂಪುರೇಷೆ ಮತ್ತು ಸಿಲೆಬಸ್ ಅನ್ನು ತಯಾರಿಸಿದೆ. ಇದು ಖಂಡಿತವಾಗಿಯೂ ಗ್ರಂಥಪಾಲಕರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂಬುವುದರಲ್ಲಿ ಅನುಮಾನ ಇಲ್ಲ ಎಂದು ವಿವರಿಸಿದರು.
ವಿಟಿಯು ಕುಲಸಚಿವ ಪ್ರೊ.ಎ.ಎಸ್.ದೇಶಪಾಂಡೆ, ಬಲಾನಿ ಇನ್ಫೋಟೆಕ್ ಪ್ರೈ.ಲಿ.ಅಧ್ಯಕ್ಷ ಮತ್ತು ಎಂಡಿ ಕೈಲಾಸ ಬಲಾನಿ ಮಾತನಾಡಿದರು. ವರ್ಚುವಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಟಿಯು ಗ್ರಂಥಪಾಲಕ ಡಾ.ಕೆ.ಆರ್.ಮುಲ್ಲಾ, ಕೆಎಲ್‌ಇ ಗ್ರಂಥಪಾಲಕ ಡಾ.ಸತೀಶ ತೋಟರ, ಒರಿಸ್ಸಾ ಐಸೆರ್‌ನ ಸಹಾಯಕ ಗ್ರಂಥಪಾಲಕ ಅರುಣ ಅಡ್ರಕಟ್ಟಿ, ವಿಟಿಯು ಸಹಾಯಕ ಗ್ರಂಥಪಾಲಕ ಭೀಮಪ್ಪ ಹಂದಿಗುಂದ, ಗೊಗಟೆ ಕಾಲೇಜು ಗ್ರಂಥಪಾಲಕ ಬಸವರಾಜ ಕುಂಬಾರ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿನ ಗ್ರಂಥಪಾಲಕರು ಪಾಲ್ಗೊಂಡಿದ್ದರು.
ಎಲ್‌ಐಎಸ್ ಅಕಾಡೆಮಿಯೊಂದಿಗೆ ವಿಟಿಯು ಗ್ರಂಥಪಾಲಕರಿಗಾಗಿಯೇ ಬೆಂಗಳೂರಿನ ವಿಟಿಯು ಆವರಣದಲ್ಲಿ ಆರಂಭಿಸಿರುವ ೬ ಬಗೆಯ ಸಂಜೆ ಕೋರ್ಸ್‌ಗಳನ್ನು ಗ್ರಂಥಪಾಲಕರು ಮತ್ತು ಇದೆ ವೃತ್ತಿಯಲ್ಲಿ ಭವಿಷ್ಯ ಕಾಣುವ ಆಕಾಂಕ್ಷಿಗಳು ಈ ಕೋರ್ಸ್‌ಗಳನ್ನು ಕಲಿಯಬೇಕು. ಮುಂದಿನ ದಿನಗಳಲ್ಲಿ ಎಲ್‌ಐಎಸ್ ಅಕಾಡೆಮಿಯು ಗ್ರಂಥಪಾಲಕರಿಗಾಗಿಯೇ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳನ್ನು ಆರಂಭಿಸಲಿ.ಮಾತ್ರವಲ್ಲ, ದೇಶದ ನಾನಾ ಭಾಗಗಳಲ್ಲಿರುವ ಗ್ರಂಥಪಾಲಕ ತಂತ್ರಜ್ಞರನ್ನೊಳಗೊಂಡ ತಂಡವು ಈ ಕೋರ್ಸ್‌ಗಳನ್ನು ಆರಂಭಿಸಿರುವುದು ಹೆಮ್ಮೆಯ ವಿಚಾರ.
ಪ್ರೊ.ಕರಿಸಿದ್ದಪ್ಪ ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ.
ಮಾರುಕಟ್ಟೆಯಲ್ಲಿ ಪ್ರಸ್ತುತ ಅಗತ್ಯ ಕೌಶಲಗಳನ್ನು ನೀಡುವ ಮೂಲಕ ವೃತ್ತಿಪರರನ್ನು ಸಜ್ಜುಗೊಳಿಸಬೇಕಿದ್ದು, ಈ ನಿಟ್ಟಿನಲ್ಲಿ 6 ಕೋರ್ಸ್ ಆರಂಭಿಸಲಾಗಿದೆ. ಅಲ್ಲದೆ, ಎಲ್‌ಐಎಸ್ ಅಕಾಡೆಮಿಯು ಕೋರ್ಸ್ ಮುಗಿಸಿದ ಟಾಪ್-1೦ ವಿದ್ಯಾರ್ಥಿಗಳಿಗೆ ₹1೦ ಸಾವಿರ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಡಾ.ಪಿ.ವಿ.ಕೊಣ್ಣೂರ ಎಲ್‌ಐಎಸ್ ಅಕಾಡೆಮಿಯ ಅಧ್ಯಕ್ಷರು.