ಅಕ್ಕತಂಗಿಯರಹಾಳ ದಿಂದ ಬೆಳಗಾವಿಗೆ ಬರುತ್ತಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್ ಬಿದ್ದಿದ್ದು, ಕ್ರೂಸರ್ನಲ್ಲಿದ್ದ 7 ಜನರು ಸಾವನ್ನಪ್ಪಿದ್ದಾರೆ.
ಯುವ ಭಾರತ ಸುದ್ದಿ ಬೆಳಗಾವಿ: ಕ್ರೂಸರ್ ಪಲ್ಟಿಯಾಗಿ 7 ಜನರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ದಾರುಣ ಘಟನೆ ತಾಲೂಕಿನ ಕಣಬರಗಿ ಸಮೀಪ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್ ವಾಹನ ಬಿದ್ದಿದೆ. ದಿನಗೂಲಿ ಕೆಲಸಕ್ಕೆಂದು ಗೋಕಾಕ್ ತಾಲೂಕಿನ ಅಕ್ಕತಂಗಿಯರ ಹಾಳ ಗ್ರಾಮದಿಂದ ಬೆಳಗಾವಿಗೆ ಬರುತ್ತಿದ್ದಾಗ ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್ ಬಿದ್ದಿದ್ದು, ಕ್ರೂಸರ್ನಲ್ಲಿದ್ದ 7 ಜನರು ಸಾವನ್ನಪ್ಪಿದ್ದಾರೆ.
ಬೆಳಗಾವಿಗೆ ಬರುತ್ತಿದ್ದಾಗ. ಮಾರಿಹಾಳ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡುತ್ತಿದ್ದಾರೆ.
ರೈಲು ಹಳಿ ಜೋಡಣೆ ಕೆಲಸಕ್ಕೆ ಒಟ್ಟು 18 ಜನರು ಬೆಳಗಾವಿಗೆ ಆಗಮಿಸುತ್ತಿದ್ದರು. ಕಲ್ಯಾಳ ಪುಲ್ ಬಳಿ ಕ್ರೂಸರ್ ನಿಯಂತ್ರಣ ತಪ್ಪಿದೆ. ಈ ವೇಳೆ ಸ್ಥಳದಲ್ಲೇ 7ಜನ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮೂವರನ್ನೂ ಸ್ಥಳೀಯರು ಹಾಗೂ ಪೊಲೀಸರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿದ್ದು, ಘಟನೆ ಕುರಿತು ಮಾಹಿತಿ ಪಡೆದರು. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗೋಕಾಕ ತಾಲೂಕಿನ ಅಕ್ಕತಂಗಿಯರ ಹಾಳ ಗ್ರಾಮ ನಿವಾಸಿಗಳಾದ ಬಸು ಹನಮನ್ನವರ, ಫಕೀರಪ್ಪ ಕಳಸನ್ನವರ, ಅಡಿವೆಪ್ಪ ಚಿಲಬಾವಿ, ಕರೆಪ್ಪ ಗಸ್ತಿ, ಬಸವರಾಜ ದಳವಿ, ಕೃಷ್ಣಾ ಕಂಡೂರಿ ಮೃತರು. ನಾಲಾಕ್ಕೆ ಬಿದ್ದಿರುವ ಕ್ರೂಸರ್ ಮೇಲೆತ್ತಲು ಪೊಲೀಸರು ಕ್ರೇನ್ ತರೆಸಿದ್ದಾರೆ.