ಸಂಗೊಳ್ಳಿ ರಾಯಣ್ಣ ಮೂರ್ತಿಯ ಬೃಹತ್ ಶೋಭಾಯಾತ್ರೆಗೆ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಚಾಲನೆ!!
ಯುವ ಭಾರತ ಸುದ್ದಿ ಗೋಕಾಕ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತೋತ್ಸವ ಮತ್ತು ಸ್ವಾತಂತ್ರ‍್ಯೋತ್ಸವ ಅಂಗವಾಗಿ ಮಂಗಳವಾರದAದು ನಗರದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಪಡೆಯಿಂದ ಹಮ್ಮಿಕೊಂಡ ಸಂಗೊಳ್ಳಿ ರಾಯಣ್ಣ ಮೂರ್ತಿಯ ಬೃಹತ್ ಶೋಭಾಯಾತ್ರೆಗೆ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಚಾಲನೆ ನೀಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯ ಬೃಹತ್ ಶೋಭಾಯಾತ್ರೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿವಿಧ ಬೀದಿಗಳಲ್ಲಿ ಸಂಚರಿಸಿ ಶ್ರೀ ಕೊಳವಿ ಹನುಮಾನ ದೇವಸ್ಥಾನದ ವರೆಗೆ ಜರುಗಿತು.
ಶೋಭಾಯಾತ್ರೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಡ್ಡೆಪ್ಪ ತೋಳಿನವರ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಶಾಸಕರ ಆಪ್ತ ಸಹಾಯಕರಾದ ಸುರೇಶ ಸನದಿ, ಕಾಂತು ಎತ್ತಿನಮನಿ, ಗುತ್ತಿಗೇದಾರ ಆಸೀಫ್ ಮುಲ್ಲಾ, ರಾಜೇಶ್ವರಿ ಒಡೆಯರ, ವಿಜಯ ಅರಭಾಂವಿ, ಅನೀಲ ತುರಾಯಿದಾರ, ಆನಂದ ಉಳ್ಳಾಗಡ್ಡಿ, ಸುರೇಶ ಉಳ್ಳಾಗಡ್ಡಿ, ಸಂತೋಷ ಕಟ್ಟಿಕಾರ, ಚೇತನ ಚಂದರಗಿ, ರಾಜು ನಿಲಜಗಿ, ಶ್ರೀ ಸಂಗೊಳ್ಳಿ ರಾಯಣ್ಣ ಯುವ ಪಡೆಯ ಸದಸ್ಯರು ಸಾವಿರಾರು ಜನ ರಾಯಣ್ಣ ಅಭಿಮಾನಿಗಳು ಪಾಲ್ಗೊಂಡಿದ್ದರು.
YuvaBharataha Latest Kannada News