ಘಟಪ್ರಭಾ ನದಿಗೆ 20ಸಾವಿರ ಕ್ಯೂಸೇಕ್ಸ ನೀರು ಹರಿದು ಬರಲಿದೆ-ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ.!
ಯುವ ಭಾರತ ಸುದ್ದಿ ಗೋಕಾಕ: ಕಳೆದ ಮೂರು ದಿನಗಳಿಂದ ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಘಟಪ್ರಭಾ ನದಿಗೆ 2೦ಸಾವಿರ ಕ್ಯೂಸೇಕ್ಸ ನೀರು ಹರಿದು ಬರಲಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
ಹಿಡಕಲ್ ಜಲಾಶಯದಿಂದ ಈಗ ಹೆಚ್ಚುವರಿಯಾಗಿ 15೦೦೦ ಕ್ಯೂಸೇಕ್ಸ್ ನೀರು ಬಿಡುಗಡೆ ಮಾಡುತ್ತಿದ್ದು(2೦೦೦೦ ಕ್ಯೂಸೇಕ್ಸ ವರೆಗೆ ಹೆಚ್ಚಿಸುವ ಸಾದ್ಯತೆ ಇದೆ), ನದಿ ತೀರದ ಗ್ರಾಮಗಳ ಎಲ್ಲ ಸಾರ್ವಜನಿಕರನ್ನು ಜಾಗೃತಗೊಳಿಸುವಂತೆ ನ್ಯೂಡಲ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನದಿ ತೀರದ ಸಾರ್ವಜನಿಕರು ತಮ್ಮ ಜಾನವಾರುಗಳೊಂದಿಗೆ ಎತ್ತರದ ಸ್ಥಳಗಳಿಗೆ ತೆರಳಲು ಕ್ರಮಕೈಗೊಂಡು. ಈ ಬಗ್ಗೆ ಡಂಗುರ ಸಾರುವುದು ಮತ್ತು ಮೈಕಿಂಗ್ ಮಾಡಲು ಮತ್ತು ಅಧಿಕಾರಿಗಳು ತಪ್ಪದೇ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.