ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗಳಿಗೆ ಕಿವಿ ಕೂಡ ಬೇಡಿ-ಮನೋಜಕುಮಾರ ನಾಯಿಕ!!

ಯುವ ಭಾರತ ಸುದ್ದಿ ಘಟಪ್ರಭಾ; ಸಾರ್ವಜನಿಕರು ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗಳಿಗೆ ಕಿವಿ ಕೂಡ ಬೇಡಿ, ಎಂದು ಗೋಕಾಕ ಡಿ. ವಾಯ್. ಎಸ್ಪಿ ಮನೋಜಕುಮಾರ ನಾಯಿಕ ಹೇಳದರು.
ಅವರು ಬುಧವಾರ ಸಂಜೆ ಸ್ಥಳೀಯ ರೈಲು ನಿಲ್ದಾಣದಲ್ಲಿ ಸಾರ್ವಜನಿಕ ಜಾಗೃತಿ ಸಭೆಯಲ್ಲಿ ಮಾತನಾಡುತ್ತಾ, ಬೆಳಗಾವಿ ಜಿಲ್ಲೆಯಲ್ಲಿ ಹರಡುತ್ತಿರುವ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರು ಗಮನ ಹರಿಸಬಾರದು. ಬೇರೆ ಎಲ್ಲಿಯೂ ನಡೆದಂತಹ ಪ್ರಕರಣಗಳ ಸುಳ್ಳು ವಿಡಿಯೋಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮಕ್ಕಳ ಕಳ್ಳತನ ಪ್ರಕರಣಗಳು ಎಂದು ಬಿಂಬಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅಂತಹ ಯಾವುದೇ ಪ್ರಕರಣಗಳು ನಡೆದಿಲ್ಲ ಎಂದು ಸ್ಪಷ್ಟ ಪಡಿಸಿ, ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ 112 ಗೆ ಕರೆ ಮಾಡಿ ಎಂದು ಹೇಳಿದರು.
ಘಟಪ್ರಭಾ ಪೋಲಿಸ್ ಠಾಣೆಯ ಸಿಪಿಐ ಶ್ರೀಶೈಲ ಬ್ಯಾಕೂಡ, ಸಿಬ್ಬಂದಿಗಳಾ ವಿಠ್ಠಲ ಕೋಳಿ, ಹಿರಿಯರಾದ ಸುರೇಶ ಪಾಟೀಲ, ಸಲೀಮ ಕಬ್ಬೂರ, ಶ್ರೀಕಾಂತ್ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.
YuvaBharataha Latest Kannada News