Breaking News
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ರಸ್ತೆಗಳ ಅಭಿವೃದ್ಧಿ ಪಡಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯ ಶ್ಲಾಘಣೀಯ- ಅಮರಸಿದ್ಧೇಶ್ವರ ಶ್ರೀ.!

Spread the love

ರಸ್ತೆಗಳ ಅಭಿವೃದ್ಧಿ ಪಡಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯ ಶ್ಲಾಘಣೀಯ- ಅಮರಸಿದ್ಧೇಶ್ವರ ಶ್ರೀ.!

ಗೋಕಾಕ: ಗೋಕಾಕ ಮತಕ್ಷೇತ್ರದಲ್ಲಿ ಗ್ರಾಮಗಳ ರಸ್ತೆ ಮತ್ತು ರೈತರ ತೋಟದ ರಸ್ತೆಗಳ ನಿರ್ಮಾಣಕ್ಕಾಗಿ ಸುಮಾರು ೫೦ಕೋಟಿಗೂ ಅಧಿಕ ಹಣವನ್ನು ಸರಕಾರದಿಂದ ಬಿಡುಗಡೆಗೊಳಿಸಿ ರಸ್ತೆಗಳ ಅಭಿವೃದ್ಧಿ ಪಡಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯ ಶ್ಲಾಘಣೀಯ ಎಂದು ಕುಂದರಗಿಯ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಸ್ವಾಮಿಜಿ ಹೇಳಿದರು.
ಅವರು, ತಾಲೂಕಿನ ಕುಂದರಗಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಶಾಸಕರು ಕುಂದರನಾಡಿನ ಭಾಗದಲ್ಲಿ ರೈತರ ಕಷ್ಟಕಾರ್ಪಣ್ಯಗಳಿಗೆ ಸ್ಫಂಧಿಸುತ್ತ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ನಾಯಕರನ್ನು ಪಡೆದ ಜನರು ಪುಣ್ಯವಂತರು. ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಶಾಸಕರಿಗೆ ಸಹಕರಿಸಬೇಕು ಎಂದರು.
ಗೋಕಾಕ ಮತಕ್ಷೇತ್ರದ ಪ್ರಮುಖ ರಸ್ತೆಗಳು ಗರಿಷ್ಠ ಪ್ರಮಾಣದಲ್ಲಿ ಅಭಿವೃದ್ಧಿಯಾಗಿವೆ. ಗ್ರಾಮಗಳ ರಸ್ತೆಗಳ ಸುಧಾರಣೆಗಾಗಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸುತ್ತಿದ್ದಾರೆ. ಅವರಿಂದ ಗೋಕಾಕ ಮತಕ್ಷೇತ್ರ ಮಾದರಿ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ ಎಂದು ರಮೇಶ ಜಾರಕಿಹೊಳಿ ಅವರನ್ನು ಶ್ಲಾಘಿಸಿದರು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಮಾತನಾಡಿ, ಗುತ್ತಿಗೇದಾರರು ಗುಣ ಮಟ್ಟದ ಕಾಮಗಾರಿ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಜೊತೆ ಕೈಜೋಡಿಸಬೇಕು ಎಂದು ಹೇಳಿದರು.
ಉ.ಬೆಣಚಿನಮರ್ಡಿ, ದಾಸನಟ್ಟಿ, ಕುಂದರಗಿ, ಮಲ್ಲಾಪೂರ, ಯದ್ದಲಗುಡ್ಡ, ಅಂಕಲಗಿ, ಸುಲಧಾಳ ಗ್ರಾಮಗಳಲ್ಲಿ ಸುಮಾರು ೮ಕೋಟಿ ರೂಗಳ ವೆಚ್ಚದ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿದರು.
ಶಾಸಕರ ಆಪ್ತ ಸಹಾಯಕ ಭೀಮನಗೌಡ ಪೋಲಿಸಗೌಡ್ರ, ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಅಡಿವೆಪ್ಪ ನಾವಲಗಟ್ಟಿ, ವೀರುಪಾಕ್ಷ ಅಂಗಡಿ, ಮುನ್ನಾ ದೇಸಾಯಿ, ಜನಯಗೌಡ ಪಾಟೀಲ, ಬಸವರಾಜ ವಾಲಿ, ಗಂಗಾಧರ ಪಾಟೀಲ, ನಿಂಗನಗೌಡ ಪಾಟೀಲ, ಗೂಳಪ್ಪ ಹಡಗಿನಾಳ, ಪರಶುರಾಮ ಗೋಡಿ, ರುದ್ರಪ್ಪ ನಾಯಕ, ರಾಮಣ್ಣ ಸುಂಬಳಿ, ಉತ್ತಮ ದಂಡಿನ, ಶಿವಾನಂದ ತೋಟಗಿ, ಭೋರಪ್ಪ ತಳವಾರ, ಚಂದ್ರು ಗಸ್ತಿ, ಆರ್ ಬಿ ಪಾಟೀಲ, ಬಸನಗೌಡ ಪಾಟೀಲ, ಉದಯ ತಳವಾರ, ಸತ್ತೆಪ್ಪ ಪಾಟೀಲ, ಬಾಳಗೌಡ ಪಾಟೀಲ, ಮಾರುತಿ ಗೊಡಲಕುಂದರಗಿ. ಮಾರುತಿ ನಾರಿ ಸೇರಿದಂತೆ ಜನಪ್ರತಿನಿಧಿಗಳು, ಗ್ರಾಮಗಳ ಹಿರಿಯರು ಅನೇಕರು ಉಪಸ್ಥಿರಿದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

5 + 1 =