ಉತ್ತರ ಕ್ಷೇತ್ರದಲ್ಲಿ ಸುಧೀರ ಗಡ್ಡೆ ಹೆಸರು ಪವರ್ ಫುಲ್!
ಕೈ ನಾಯಕರಿಗೆ ಸಿಕ್ತು ಸುಧೀರ ಗಡ್ಡೆ ಉತ್ತರ
ಬೆಳಗಾವಿ: ಎಲ್ಲರ ಹುಬ್ಬೇರಿಸುತ್ತಿರುವ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ಉತ್ತರ ಹುಡುಕಾಡುವಾಗ ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಧೀರ ಗಡ್ಡೆ ಅವರ ಹೆಸರು ಮುಂಚೂಣಿಯಲ್ಲಿ ಬರುತ್ತಿದೆ.
ಒಂದೆಡೆ ಮುಸ್ಲಿಂ ಸಮುದಾಯ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಮರಾಠಾ ಸಮಾಜದ ಮತಗಳ ಕಳೆದುಕೊಳ್ಳಬಹುದು, ಮರಾಠಾ ಅಥವಾ ಲಿಂಗಾಯತರಿಗೆ ಕೊಟ್ಟರೆ ಮುಸ್ಲಿಂ, ಎಸ್‌ಸಿ, ಎಸ್‌ಟಿ ಮತಗಳು ಕಾಂಗ್ರೆಸ್ ಬುಟ್ಟಿಯಿಂದ ಕೈ ತಪ್ಪುವ ಸಾಧ್ಯತೆಯೂ ಇದೆ. ಹೀಗಾಗಿ ಎಲ್ಲ ಸಮಾಜದ ಮತಗಳು ಕಾಂಗ್ರೆಸ್ ತೆಕ್ಕೆಗೆ ಬರಬೇಕಾದರೆ ಸುಧೀರ ಗಡ್ಡೆ ಅವರೇ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಬಗ್ಗೆ ಕಾಂಗ್ರೆಸ್ ವರಿಷ್ಠರು ಅಭಿಮತ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಉತ್ತರ ಮತಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಸುಧೀರ ಗಡ್ಡೆ ಅವರಿಗೆ ಮರಾಠಾ, ಮುಸ್ಲಿಂ, ಲಿಂಗಾಯತ, ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲ ಸಮಾಜದವರು ಆತ್ಮೀಯರಾಗಿದ್ದಾರೆ. ಬಹುತೇಕ ಅನೇಕ ಸಂಘಟನೆಗಳ ಪ್ರಮುಖರೊಂದಿಗೆ ಸುಧೀರ ಗಡ್ಡೆ ಒಡನಾಟ ಹೊಂದಿದ್ದಾರೆ. ಉತ್ತರ ಮತಕ್ಷೇತ್ರದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿರುವ ಸುಧೀರ ಗಡ್ಡೆ ಅತ್ಯಂತ ಪ್ರಭಾವಶಾಲಿ ನಾಯಕನೂ ಹೌದು.
ಎಪಿಎಂಸಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ರೈತರ ಸೇವೆ ಕಂಕಣಬದ್ಧರಾಗಿ ಕೆಲಸ ಮಾಡಿದ್ದಾರೆ. ಜತೆಗೆ ಇವರ ತಂದೆ ನಾಗೇಶ ಗಡ್ಡೆ ಅವರಿಗೂ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಅವರದ್ದೇ ಆದ ಪಡೆ ಇದೆ. ಕ್ಷೇತ್ರದ ಬಸವನ ಕುಡಚಿ, ಅಲಾರವಾಡ, ಕಣಬರ್ಗಿ ಸೇರಿದಂತೆ ರೈತರು ಇರುವ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ನಾಗೇಶ ಗಡ್ಡೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಈ ಸಲದ ಕಾಂಗ್ರೆಸ್‌ನ ಬಿ ಫಾರಂ ಸುಧೀರ ಗಡ್ಡೆ ಅವರಿಗೆ ನೀಡಬೇಕು ಎಂಬುದು ಸಭೆಯಲ್ಲಿ ಚರ್ಚೆ ಆಗುತ್ತಿದೆ. ಜತೆ ಜತೆಗೆ ಫಿರೋಜ ಸೇಠ ಹೆಸರೂ ಮುನ್ನೆಲೆಗೆ ಬಂದಿದ್ದು, ಕೈ ನಾಯಕರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.