Breaking News

ವಕೀಲರಿಗೆ ಬೇಸಿಗೆಯಲ್ಲಿ ಕಪ್ಪು ಕೋಟ್ ಕಡ್ಡಾಯವಲ್ಲ

Spread the love

ವಕೀಲರಿಗೆ ಬೇಸಿಗೆಯಲ್ಲಿ ಕಪ್ಪು ಕೋಟ್ ಕಡ್ಡಾಯವಲ್ಲ

ಯುವ ಭಾರತ ಸುದ್ದಿ ಬೆಂಗಳೂರು :
ಬಿರು ಬೇಸಿಗೆ ಕಾಲಿಟ್ಟಿದೆ.
ಹೀಗಾಗಿ ಬೇಸಿಗೆಯಲ್ಲಿ ವಕೀಲರಿಗೆ ಕಪ್ಪುಕೋಟು ಕಡ್ಡಾಯವಲ್ಲ. ಬೇಸಿಗೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳನ್ನು ಹೊರತುಪಡಿಸಿ ವಿಚಾರಣಾ ನ್ಯಾಯಾಲಯಗಳನ್ನು ಪ್ರವೇಶಿಸುವ , ವಾದ ಮಂಡಿಸುವ ಅಥವಾ ಕಲಾಪಗಳಲ್ಲಿ ಸಕ್ರಿಯರಾಗುವ ವಕೀಲರು ಕಪ್ಪುಕೋಟು ಧರಿಸುವುದು ಕಡ್ಡಾಯವಲ್ಲ ಎಂದು ರಾಜ್ಯ ವಕೀಲರ ಪರಿಷತ್‌ ತಿಳಿಸಿದೆ . ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್ . ರಘು ಅವರು , ಭಾರತೀಯ ವಕೀಲರ ಪರಿಷತ್ ನಿಯಮಗಳ ಅಧ್ಯಾಯ 4 ರ ಭಾಗ 4 ರಲ್ಲಿ ವಿವರಿಸಿರುವಂತೆ ವಕೀಲ ವೃಂದಕ್ಕೆ ಈ ಕುರಿತಂತೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷರಿಗೆ ಕೋರಿದ್ದಾರೆ .

ವಕೀಲರ ಕಾಯ್ದೆ 1961 ರ ಕಲಂ 49 ( 1 ) ( ಜಿಜಿ ) ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳಂತೆ , ಪರುಷ ವಕೀಲರು ಬಿಳಿ ಶರ್ಟ್ , ಕಪ್ಪು ಅಥವಾ ಬೂದು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬ್ಯಾಂಡ್ ನೊಂದಿಗೆ ಕಾಣಿಸಿಕೊಳ್ಳಬಹುದಾಗಿದೆ . ಮಹಿಳಾ ವಕೀಲರು ಸೀರೆ ಅಥವಾ ಉದ್ದನೆಯ ಸ್ಕರ್ಟ್‌ಳಲ್ಲಿ ( ಬಿಳಿ ಅಥವಾ ಕಪ್ಪು ಅಥವಾ ಯಾವುದೇ ಮುದ್ರೆ ಅಥವಾ ವಿನ್ಯಾಸವಿಲ್ಲದ ) ಅಥವಾ ಪಂಜಾಬಿ ಉಡುಗೆ ಅಥವಾ ಚೂಡಿದಾರ್ ಕುರ್ತಾ ಅಥವಾ ಸಲ್ವಾರ್ ಕುರ್ತಾ ( ಬಿಳಿ ಅಥವಾ ಕಪ್ಪು ಬಿಳಿ ಬ್ಯಾಂಡ್‌ನೊಂದಿಗೆ ಕಾಣಿಸಿಕೊಳ್ಳಬಹುದಾಗಿದೆ .


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

4 + nine =