ಹೊತ್ತಿ ಉರಿದ ಲಾರಿ

ಬೆಳಗಾವಿ :
ದಾಬಾ ಮುಂದೆ ಕಾರುಗಳನ್ನು ಹೊತ್ತು ನಿಂತಿದ್ದ ಎರಡು ಕ್ಯಾಂಟರ್ ಲಾರಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ.ಹಾನಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಧಾಬಾ ಒಂದರ ಮುಂದೆ ನಿಂತಿದ್ದ ಕ್ಯಾಂಟರ್ ಲಾರಿಗಳಿಗೆ ಬೆಂಕಿ ಬಿದ್ದು ಈ ಅವಘಡ ಸಂಭವಿಸಿದೆ.
ಆದರೆ ಈ ಬೆಂಕಿ ಅವಘಡ ನಡೆದ ಸ್ಥಳದಿಂದ ಸ್ವಲ್ಪ ಅಂತರದಲ್ಲಿಯೇ ಪೆಟ್ರೋಲ್ ಬಂಕ್ ಒಂದು ಇದ್ದು, ಇದಕ್ಕು ಅಪಾಯವಾಗುವ ಪರಿಸ್ಥಿತಿ ಇತ್ತು. ಕ್ಯಾಂಟರ್ ಲಾರಿಗಳು ವಾಹನಗಳನ್ನು ಸಾಗಿಸುವ ಲಾರಿಗಳಾಗಿವೆ. ಈ ಕ್ಯಾಂಟರ್ ಗಳಲ್ಲಿ ವಾಹನಗಳು ತುಂಬಿದ್ದವು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ದೌಡಾಯಿಸಿದ್ದಾರೆ.
YuvaBharataha Latest Kannada News