ಭಾರಿ ಮಳೆ ಗಾಳಿಗೆ ಹೊಟೇಲ್ ಮೇಲೆ ಉರುಳಿ ಬಿದ್ದ ಬೃಹತ್ ಮರ : ಹೊರಗೆ ಓಡಿ ಬಚಾವಾದ ಮಾಲಿಕ

ಸಂಕೇಶ್ವರ :
ಸೋಮವಾರ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಬೃಹತ್ ಗಾತ್ರದ ಮರವೊಂದು ಬಡಪಾಯಿಯ ಹೊಟೇಲ್ ಮೇಲೆ ಉರುಳಿ ಬಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿರುವ ಘಟನೆ ಸಂಕೇಶ್ವರ ನಗರದಲ್ಲಿ ನಡೆದಿದೆ. ಬಡಪಾಯಿ ಮಾಲಿಕ ಓಡಿ ಬಂದು ಬಚಾವಾಗಿದ್ದಾನೆ.
ಸೋಮವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಸಂಕೇಶ್ವರ ಪಟ್ಟಣದ ಸರಕಾರಿ ಆಸ್ಪತ್ರೆಯ ಬಳಿ ಇದ್ದ ಸಣ್ಣ ಹೊಟೇಲ್ ಮೇಲೆ ಬೃಹತ್ ಮರವೊಂದು ಬುಡಸಮೇತವಾಗಿ ಉರುಳಿ ಬಿದ್ದಿದೆ. ಈ ವೇಳೆ ಹೊಟೇಲ್ ನಲ್ಲಿದ್ದ ಬಡಪಾಯಿ ಮಾಲಿಕ ಹೊರ ಓಡಿ ಬಂದು ಜೀವ ಉಳಿಸಿಕೊಂಡಿದ್ದಾನೆ.
ಘಟನೆಯಲ್ಲಿ ಹೊಟೇಲ್ ನಲ್ಲಿ ಇದ್ದ ಫ್ರಿಜ್, ಟೇಬಲ್, ಕುರ್ಚಿ, ಅಡುಗೆ ಸಾಮಗ್ರಿಗಳು ಸೇರಿದಂತೆ ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
YuvaBharataha Latest Kannada News