Breaking News

ವರ್ಚಸ್ವಿ ನಾಯಕ ಮಲ್ಲನಗೌಡರಿಗೆ ಈ ಬಾರಿ ಕಮಲ ಟಿಕೆಟ್ ?

Spread the love

ವರ್ಚಸ್ವಿ ನಾಯಕ ಮಲ್ಲನಗೌಡರಿಗೆ ಈ ಬಾರಿ ಕಮಲ ಟಿಕೆಟ್ ?

ಯುವ ಭಾರತ ಸುದ್ದಿ ದೇವರಹಿಪ್ಪರಗಿ:
ವಿಧಾನಸಭಾ ಚುನಾವಣೆಗೆ ಮಲ್ಲನಗೌಡ ಪಾಟೀಲ ಅವರಿಗೆ ಈ ಬಾರಿ ಕಮಲ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆಗಳು ಬಹುತೇಕ ಹೆಚ್ಚಿದೆ.

ಮಲ್ಲನಗೌಡ. ಎಸ್. ಪಾಟೀಲ (ಕೋರವಾರ), ಇವರು ಕಳೆದ 2018 ನೇ ಇಸ್ವಿಯಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ರಾಜಕೀಯ ಬದಲಾವಣೆ ಬೆಳವಣಿಗೆಗಳಿಂದ ಟಿಕೆಟ್ ಕೈ ತಪ್ಪಿತು.
ಈ ಭಾರೀ ಮತ್ತೆ ಬಿಜೆಪಿಯಿಂದ ದೇವರಹಿಪ್ಪರಗಿ ಹಾಗೂ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಗಳಿಂದ ಪ್ರಬಲ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು (M. Tech. in Digital Electronics), ಮಾಹಿತಿ ತಂತ್ರಜ್ಞಾನ ಉದ್ಯಮಿ, ಒಂದು ದಶಕಕ್ಕಿಂತ ಅಧಿಕ ಕಾಲ ಅಮೇರಿಕಾ ಹಾಗೂ ಯುರೋಪ್ ದೇಶಗಳಲ್ಲಿ ಸೇವೆ ಸಲ್ಲಿಸಿದ ಅನುಭವ. ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ಹಾಗೂ ಪ್ರಬಲ ಸಮಾಜ ಲಿಂಗಾಯತ ಪಂಚಮಸಾಲಿ ಸಮಾಜದವರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರು.ಪಂಚಮಸಾಲಿ ಸಮಾಜವೇ ಚುನಾವಣೆಯಲ್ಲಿ ನಿರ್ಣಾಯಕ.
ಮಲ್ಲನಗೌಡರ ಮಾವನವರಾದ ದಿ.ಕೆ. ಡಿ. ಪಾಟೀಲ (ಮಿಣಜಗಿ) ಗೌಡರು, ಉತ್ತರ ಕರ್ನಾಟಕ ಭಾಗದಲ್ಲಿ ಚಿರಪರಿಚಿತರು ಹಾಗೂ ಇಡೀ ವಿಜಯಪುರ ಜಿಲ್ಲೆಯಲ್ಲಿ ಪ್ರಭಾವಿ ವರ್ಚಸ್ವಿ ನಾಯಕರಾಗಿದ್ದರು. ನಂತರ ಅವರ ಅಳಿಯ ಮಲ್ಲನಗೌಡರು ಸಕ್ರಿಯವಾಗಿ ತಮ್ಮನ್ನು ತಾವು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.ಆರ್ ಎಸ್ ಎಸ್ ಸ್ವಯಂ ಸೇವಕರಾಗಿ ಹಾಗೂ ಬಿಜೆಪಿ ಕಾರ್ಯಕರ್ತನಾಗಿ, ಹಿರಿಯ ಬಿಜೆಪಿ ನಾಯಕರೊಂದಿಗೆ ಒಳ್ಳೆಯ ಒಡನಾಟ ಹಾಗೂ ಸಂಬಂಧಗಳನ್ನು ಬೆಳಿಸಿಕೊಂಡಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂತಹ ಒಬ್ಬ ವಿದ್ಯಾವಂತ, ಕ್ರೀಯಾಶೀಲ, ಸಜ್ಜನ, ಸುಸಂಸ್ಕೃತ, ಶಿಕ್ಷಣ ಪ್ರೇಮಿ ಹಾಗೂ ಮೇಧಾವಿ ಜನನಾಯಕರು ಈ ಕ್ಷೇತ್ರಗಳಿಗೆ ಅತ್ಯವಶ್ಯಕ ಎಂದು ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ. ಈ ಭಾರಿ ಬಿಜೆಪಿ ಗುಜರಾತ ರಾಜ್ಯದಲ್ಲಿ ಹೊಸ ಮುಖಗಳನ್ನು ಗುರುತಿಸಿ ಆದ್ಯತೆ ಕೊಟ್ಟು ಪ್ರಚಂಡ ಬಹುಮತಗಳಿಸಿದಂತೆ, ಕರ್ನಾಟಕ ರಾಜ್ಯದಲ್ಲಿಯೂ ಇದೇ ಮಾದರಿಯನ್ನು ಅನುಸರಿಸಿ ಹೊಸ ಮುಖಗಳಿಗೆ ಅವಕಾಶ ಕೊಡುವ ಸಂಭವ ಜಾಸ್ತಿ ಇರುವುದರಿಂದ, ಮಲ್ಲನಗೌಡರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಕ್ಷೇತ್ರಗಳಲ್ಲಿ ಮತದಾರರ ಅಭಿಪ್ರಾಯವಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

two × 4 =