ಕಾರ್ಯನಿರತ ಪತ್ರಕರ್ತರ ಧ್ವನಿಯ ಪದಾಧಿಕಾರಿಗಳಿಗೆ ಸನ್ಮಾನ!

ಯುವ ಭಾರತ ಸುದ್ದಿ ಕೊಲ್ಹಾರ : ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಅಂಜುಮನ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವತಿಯಿಂದ ಸಾಮಾಜಿಕ ಪ್ರದರ್ಶನ ಹಾಗೂ ಆಹಾರ ಹಬ್ಬ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಇರ್ಫಾನ್ ಬೀಳಗಿ,ಕೊಲ್ಹಾರ ತಾಲ್ಲೂಕಾಧ್ಯಕ್ಷರಾಗಿ ಆಯ್ಕೆಯಾದ ದಸ್ತಗಿರ ಬಿದರಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, ಅಂಜುಮನ ಸಂಸ್ಥೆಯ ಅಧ್ಯಕ್ಷರಾದ ಅಲ್ಲಾಭಕ್ಷ ಬಿಜಾಪುರ, ಜಿಲ್ಲಾ ವಕ್ಫ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಪಟೇಲ, ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಫೀಕ್ ಪಕಾಲಿ, ಶಿಕ್ಷಕರಾದ ಮಹಿಬೂಬ್ ಚೌದ್ರಿ,ಅನಸರ ಜಮಖಂಡಿ, ಗೈಬುಸಾಬ್ ಕಂಕರಪೀರ್, ಪಿ.ಕೆ ಗಿರಗಾಂವಿ ಭಾಷಾಸಾಬ ಚೌದ್ರಿ ಪಟ್ಟಣ ಪಂಚಾಯತಿ ಸದಸ್ಯರಾದ ತೌಸೀಫ್ ಗಿರಗಾಂವಿ , ಶಬ್ಬೀರ್ ಪಕಾಲಿ,ಹಾಗೂ ಅಂಜುಮನ್ ಇಸ್ಲಾಂ ಕಮಿಟಿಯ ಕಾರ್ಯದರ್ಶಿ ಸಲೀಂ ಸಾರವಾಡ,ಸದಸ್ಯರಾದ ದಸ್ತಗಿರ ಕಾಖಂಡಕಿ, ಜಾವೀದ ಬೀಳಗಿ ಸಲೀಂ ಅತ್ತಾರ್ ಸರ್ವ ಸದಸ್ಯರು ಊರಿನ ಮುಖಂಡರು ಪ್ರಮುಖರು ಭಾಗವಹಿಸಿದ್ದರು.
YuvaBharataha Latest Kannada News