ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ ಅಂಬರೀಶ- ಅವಿವಾ

ಯುವ ಭಾರತ ಸುದ್ದಿ ಬೆಂಗಳೂರು:
ರೆಬೆಲ್ ಸ್ಟಾರ್ ಅಂಬರೀಷ ಅವರ ಪುತ್ರ ಅಭಿಷೇಕ – ಅವಿವಾ ಬಿಡಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ, ಸ್ನೇಹಿತರ ಮುಂದೆ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.
ಬೆಂಗಳೂರಿನ ಮಾಣಿಕ್ಯ ವಜ್ರ ಮಂಟಪದಲ್ಲಿ ವಿವಾಹ ಶಾಸ್ತ್ರ ನೆರವೇರಿತು. ಮದುವೆ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ನಟ ಯಶ್, ನಟಿ ಸುಹಾಸಿನಿ, ಟಾಲಿವುಡ್ ನಟರಾದ ಮೋಹನ್ ಬಾಬು, ಮಂಚು ಮನೋಜ್, ನಟ ನರೇಶ್, ಪವಿತ್ರ, ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 11 ರಂದು ಖ್ಯಾತ ಫ್ಯಾಷನ್ ಡಿಸೈನರ್ ಆಗಿರುವ ಪ್ರಸಾದ್ ಬಿಡಪ್ಪ ಅವರ ಪುತ್ರಿ ಅವಿವಾ ಬಿಡಪ್ಪ ಅವರೊಂದಿಗೆಅಭಿಷೇಕ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೂನ್ 7 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
YuvaBharataha Latest Kannada News