ಛಲದಿಂದ ಸಾಧನೆ ಮಾಡಿ ; ಶ್ರೀನಿವಾಸ
ಯುವ ಭಾರತ ಸುದ್ದಿ ಮಮದಾಪೂರ : ಗೋಕಾಕ ತಾಲೂಕಿನ ಮಮದಾಪೂರ (ಅಜ್ಜನಕಟ್ಟಿ)ಯ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯದಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 21ನೇ ಮಾಲಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸ್ಪರ್ಧಾ ಪರೀಕ್ಷೆಗಳ ಮಾರ್ಗದರ್ಶಕ ಶ್ರೀನಿವಾಸ ಲ. ದಂಡಿಗದಾಸರ ಎರಡು ಬಾರಿ ಚಿನ್ನದ ಪದಕ ಗಳಿಸಿದ ಎಡಗೈ ಶೂಟರ್ ಕರೊಲಿ ಟಕಾಕ್ಸ್. ಜೇಸ್ವಾಲ್, ಏಕಲವ್ಯ ರಂಥ ಸಾಧನೆಗಳನ್ನು ಎದುರಿಗಿಟ್ಟುಕೊಂಡು ತಾವೂ ವಿದ್ಯಾರ್ಥಿ ಜೀವನದಲ್ಲೇ ನಿರಂತರ ಪರಿಶ್ರಮ, ಪ್ರಯತ್ನ, ಛಲ, ಆತ್ಮವಿಶ್ವಾಸ ಇಟ್ಟುಕೊಂಡು ಕನಸುಕಾಣಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿಕೊಂಡ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದ ನಿಲಯ ಪಾಲಕಿ ಸರಸ್ವತಿ ಕೌಜಲಗಿ ಕಾರ್ಯಕ್ರಮ ಆಯೋಜಿಸಿದ ಸಂಚಾಲಕರನ್ನು ಅಭಿನಂದಿಸುತ್ತ, ಇಂಥ ಕಾರ್ಯಕ್ರಮದ ಅವಶ್ಯಕತೆ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅವಶ್ಯಕ. ಪಾಲಕರ ಸ್ಥಾನದಲ್ಲಿ ನಿಂತು ಮಕ್ಕಳನ್ನು ಮಾನಸಿಕವಾಗಿ ಸ್ಪರ್ಧಾತ್ಮಕ ಯುಗದತ್ತ ಕೊಂಡೊಯ್ಯಬಹುದಾಗಿದೆ ಎಂದು ಖುಷಿ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಸತಿನಿಲಯದ ಬೋಧಕಿ ಶ್ರೀದೇವಿ ಕಂಡ್ರಟ್ಟಿ ಉಪಸ್ಥಿತರಿದ್ದರು.ಲಕ್ಷ್ಮೀ ಹೊಸೂರ ಮತ್ತು ಸಕ್ಕೂಬಾಯಿ ಸುಣಧೋಳಿಯವರು ವಿಜ್ಞಾನ ಗೀತೆಯನ್ನು ಹಾಡಿದರು. ಲಕ್ಷ್ಮೀ ಮುರಕುಂಬಿ ಸರ್ವರನ್ನು ಸ್ವಾಗತಿಸಿಕೊಂಡರು. ಕಾರ್ಯಕ್ರಮವನ್ನು ಆಯೋಜಿಸಿದ ಮಮದಾಪೂರದ ಚಿಂತಾಮಣಿ ಪಾವಟೆ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯದ ಸಂಚಾಲಕ ರ. ವೀ ದೇಮಶೆಟ್ಟಿಯವರು ಗೌರವ ಸಮರ್ಪಿಸಿ ವಂದಿಸಿದರು. ಸಿದ್ದವ್ವ ಐದುಡ್ಡಿ ಯವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೀರ್ತಿ ತಿಗಡಿ ಶರಣ ಮಡಿವಾಳ ಮಾಚಿದೇವರ ವಚನವನ್ನು ವಾಚಿಸಿದರು.