ಗೋಕಾಕನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ !!

ಯುವ ಭಾರತ ಸುದ್ದಿ ಗೋಕಾಕ್: ನಗರದ ಹೊರವಲಯ ಮಹಾಂತೇಶ ನಗರದಲ್ಲಿ ಘಟನೆ ನಡೆದಿದ್ದು ,ಮಂಜು ಶಂಕರ ಮುರಕಿಭಾವಿ(22) ಕೊಲೆಯಾದ ಯುವಕನಾಗಿದ್ದು,ತಡರಾತ್ರಿ ಯುವಕನ ಹತ್ಯೆಗೈದು ಪರಾರಿಯಾಗಿರುವ ದುಷ್ಕರ್ಮಿಗಳು,ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮಂಜು ಮುರಕಿಭಾವಿ, ಎಂಬಾತನನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.ಗೋಕಾಕ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
YuvaBharataha Latest Kannada News