ಯುವ ಭಾರತ ಸುದ್ದಿ, ಗೋಕಾಕ: ತಾಲೂಕಿನ ಅರಭಾಂವಿ ಪಟ್ಟಣದ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವವನ್ನು ಕೋವಿಡ್-19 ಕಾರಣದಿಂದ ರದ್ದು ಪಡಿಸಿರುವದಾಗಿ ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ.
ಕಾರ್ತಿಕ ಮಾಸದ ದಿ.18, 18, 2020ರಂದು ಜರುಗಲಿದ್ದ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವಕ್ಕೆ ರಾಜ್ಯ, ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ ಹೀಗಾಗಿ ಕೋವಿಡ್- 19ಹಿನ್ನಲೆ ಸರಕಾರದ ಆದೇಶದ ಅನುಸಾರ ರದ್ದು ಮಾಡಿ, ಜಾತ್ರಾ ಕಮೀಟಿಯಿಂದ ದೇವಸ್ಥಾನದ ಆವರಣದಲ್ಲಿ ಫಲಕವನ್ನು ಅಳವಡಿಸಲಾಗಿದೆ. ಭಕ್ತಾಧಿಗಳು ಸರಳ ಹಾಗೂ ಅಗತ್ಯ ಮುಂಜಾಗೃತ ಕ್ರಮವಗಳನ್ನು ಅನುಸರಿಸುವ ಮೂಲಕ ಆಚರಿಸಬೇಕು. ವ್ಯಾಪಾರಸ್ಥರಿಗೆ ಪಟ್ಟಣದಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಜಾತ್ರಾ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದೆ.
