Breaking News

ಅಮೃತಪಾಲ್ ಸಿಂಗ್ ಬಂಧನ

Spread the love

ಅಮೃತಪಾಲ್ ಸಿಂಗ್ ಬಂಧನ

ಯುವ ಭಾರತ ಸುದ್ದಿ ದೆಹಲಿ :
ಖಾಲಿಸ್ತಾನ ಚಳವಳಿ ಮುಖಂಡ ಅಮೃತಪಾಲ್ ಸಿಂಗ್ ಬಂಧನವಾಗಿದೆ ಎಂದು ವರದಿಯಾಗಿದೆ.

ಪಂಜಾಬ್ ನ ಮೊಗಾ ಬಳಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕೆಲ ತಿಂಗಳುಗಳಿಂದ ಈತ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಇವನ ಕಾರ್ಯಾಚರಣೆಗೆ ಪೊಲೀಸರು ಬೃಹತ್ ಜಾಲ ಬೀಸಿದ್ದರು. ಕೊನೆಗೂ ಈತನ ಬಂಧನವಾಗಿದೆ ಎನ್ನಲಾಗಿದೆ.

ಅಮೃತಪಾಲ್ ಸಿಂಗ್ ನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ. ಪಂಜಾಬ್ ಪೊಲೀಸ್ ಮತ್ತು ರಾಷ್ಟ್ರೀಯ ಗುಪ್ತಚರ ಜಂಟಿ ಪ್ರಯತ್ನಗಳಿಂದ ಬಂಧನವನ್ನು ಮಾಡಲಾಗಿದೆ.

ಅಮೃತಪಾಲ್ ಸಿಂಗ್. ಪರಾರಿಯಾಗಿದ್ದ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥನನ್ನು ಭಾನುವಾರ ಮುಂಜಾನೆ ಪಂಜಾಬ್‌ನ ಮೊಗಾ ಎಂಬಲ್ಲಿ ಬಂಧಿಸಲಾಗಿದೆ. ಮೊಗಾ ಪೊಲೀಸರು ಇನ್ನೂ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಖಲಿಸ್ತಾನಿ ಪರ ನಾಯಕನನ್ನು ಅಸ್ಸಾಂನ ದಿಬ್ರುಗಢ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಎಚ್‌ಟಿಗೆ ತಿಳಿಸಿವೆ, ಅಲ್ಲಿ ಅವರ ಸಂಘಟನೆಯ ಇತರ ಸದಸ್ಯರನ್ನು ಈಗಾಗಲೇ ಇರಿಸಲಾಗಿದೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

three × 3 =