Breaking News

Yuva Bharatha

ಬೆಳಗಾವಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಜೀವನಾಧಾರಿತ ನಾಟಕ

ಬೆಳಗಾವಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಜೀವನಾಧಾರಿತ ನಾಟಕ ಯುವ ಭಾರತ ಸುದ್ದಿ ಬೆಳಗಾವಿ : ಡಾ.ರವಿ ಪಾಟೀಲ ಮತ್ತು ವಿಜಯ ಆರ್ಥೋ ಟ್ರಾಮಾ ಸೆಂಟರ್ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಜೀವನಾಧರಿತ ನಾಟಕ ಫೆಬ್ರವರಿ 23 ಮತ್ತು 24ರ ಸಂಜೆ 5:30ಕ್ಕೆ ನಡೆಯಲಿದೆ. ನಗರದ ಸಿಪಿಎಡ್ ಮೈದಾನದಲ್ಲಿ ಈ ನಾಟಕ ನಡೆಯಲಿದೆ. ವೀರರಾಣಿ ಕಿತ್ತೂರು ಚನ್ನಮ್ಮ ಅವರ ಸಾಹಸಗಾಥೆ ವರ್ಣಿಸುವ ಹೃದಯಂಗಮ ನಾಟಕ ಇದಾಗಿದೆ. ಬೆಳಗಾವಿಯ ನಾಟಕ ಪ್ರಿಯರಿಗೆ …

Read More »

ಸಚಿನ್‌ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಸಚಿನ್‌ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ ಯುವ ಭಾರತ ಸುದ್ದಿ ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗದ 25,000 ರನ್ ಗಳಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದು ವಿರಾಟ್‌ ಕೊಹ್ಲಿ ಭಾನುವಾರ ಇತಿಹಾಸ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ದೆಹಲಿಯಲ್ಲಿ ಎರಡನೇ ಟೆಸ್ಟ್‌ನ 3ನೇ ದಿನವಾದ ಭಾನುವಾರ ಈ ಸಾಧನೆ ಮಾಡಿದ್ದಾರೆ. ಸಚಿನ್ 577 ಪಂದ್ಯಗಳಲ್ಲಿ 25,000 ರನ್ ಗಳಿಸಿದ್ದರು, ವಿರಾಟ್ 549 ಪಂದ್ಯಗಳಲ್ಲಿ ಇದನ್ನು ತಲುಪಿದ್ದಾರೆ. …

Read More »

ಶಿವರಾತ್ರಿ ಬೆನ್ನಲ್ಲೇ ಪಕ್ಷಾಂತರ ಜೋರು !

ಶಿವರಾತ್ರಿ ಬೆನ್ನಲ್ಲೇ ಪಕ್ಷಾಂತರ ಜೋರು ! ಜೆಡಿಎಸ್‌ ಸೇರಿದ ಮಾಜಿ ಎಂಎಲ್‌ಸಿ ಎಸ್‌.ಎಲ್‌. ಘೋಟ್ನೇಕರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ. ಬೆಂಗಳೂರು:  ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಮಾತ್ರ ಇರುವಾಗ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಪ್ರಮುಖ ನಾಯಕರು ಭಾನುವಾರ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಉತ್ತರ ಕನ್ನಡ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ …

Read More »

ಅಸಾಧ್ಯ!

ಅಸಾಧ್ಯ! ———– ಕೊಳ್ಳಬಹುದು ಬೆಲೆ ಬಾಳುವ ಗಡಿಯಾರ, ಸಮಯವನ್ನಲ್ಲ; ಖರೀದಿಸಬಹುದು ಮೆತ್ತನೆ ಹಾಸಿಗೆ, ನಿದ್ದೆಯನ್ನಲ್ಲ; ಗೆಲ್ಲಬಹುದು ಹಣಸುರಿದು ಚುನಾವಣೆಯನ್ನು, ಮರ್ಯಾದೆಯ ಬದುಕನ್ನಲ್ಲ! ಡಾ. ಬಸವರಾಜ ಸಾದರ

Read More »

ಅರ್ ಡಿಪಿ ಆರ್ ಇಲಾಖೆಯಿಂದ ಮೆಳವಂಕಿ ಮತ್ತು ಚಿಗಡೊಳ್ಳಿ ರಸ್ತೆಗೆ 2.20 ಕೋಟಿ ರೂ- ಶಾಸಕ ಬಾಲಚಂದ್ರ ಜಾರಕಿಹೊಳಿ

ಅರ್ ಡಿಪಿ ಆರ್ ಇಲಾಖೆಯಿಂದ ಮೆಳವಂಕಿ ಮತ್ತು ಚಿಗಡೊಳ್ಳಿ ರಸ್ತೆಗೆ 2.20 ಕೋಟಿ ರೂ- ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಗೋಕಾಕ :                          ಆರ್ ಡಿ ಪಿ ಆರ್ ಇಲಾಖೆಯ ಅನುದಾನದಲ್ಲಿ ಮೆಳವಂಕಿ ಮತ್ತು ಚಿಗಡೊಳ್ಳಿ ರಸ್ತೆಯ ಕಾಮಗಾರಿಗೆ ೨.೨೦ ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಅರಭಾವಿ ಶಾಸಕ …

Read More »

ಯಶಸ್ವಿಯಾಗಿ ಪೂರ್ಣಗೊಂಡ ರಂಗ ತರಬೇತಿ ಶಿಬಿರ

ಯಶಸ್ವಿಯಾಗಿ ಪೂರ್ಣಗೊಂಡ ರಂಗ ತರಬೇತಿ ಶಿಬಿರ ಯುವ ಭಾರತ ಸುದ್ದಿ ಬೆಳಗಾವಿ : ಡಾ. ಅರವಿಂದ ಕುಲಕರ್ಣಿಯವರ ನೇತೃತ್ವದಲ್ಲಿ ರಂಗ ಸಂಪದ ತಂಡದವರು ಎರಡು ದಿನಗಳ ಕಾಲ ರಂಗ ತರಬೇತಿ ಕಾರ್ಯಾಗಾರವನ್ನು ನಗರದ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದರು. ಎರಡು ದಿನಗಳ ಈ ತರಬೇತಿ ಶಿಬರವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕಾರ್ಯಾಗಾರದಲ್ಲಿ 16 ವಯಸ್ಸಿನಿಂದ 70 ವರ್ಷ ವಯಸ್ಸಿನ ವರೆಗೆ ಎಲ್ಲ ವಯೋಮಾನದ ಒಟ್ಟು 25 ಉತ್ಸಾಹಿ ರಂಗಾಸಕ್ತರು …

Read More »

ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ-ಬಸವಂತ ಕೋಣಿ!

ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ-ಬಸವಂತ ಕೋಣಿ! ಯುವ ಭಾರತ ಸುದ್ದಿ ಬೆಟಗೇರಿ :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಪಂಚಾಯತಿ ಸಹಯೋಗದ ಮಹಾತ್ಮಾ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರೂ.ಗಳÀ ಅನುದಾನದಡಿಯಲ್ಲಿ ಸ್ಥಳೀಯ ಮರಡಿಶಿವಾಪೂರ ಮುಖ್ಯ ರಸ್ತೆಯಿಂದ ಗುರಪ್ಪ ಮಾಕಾಳಿ ಹೊಲದವರೆಗೆ ಸುಮಾರು ೩ ಕಿ.ಮೀ, ತೋಟಪಟ್ಟಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಫೆ.೧೬ ರಂದು ನಡೆಯಿತು. …

Read More »

ಕಿತ್ತೂರು : 10 ಕೋಟಿ ವೆಚ್ಚದ ಸಭಾಮಂಟಪಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ

ಕಿತ್ತೂರು : 10 ಕೋಟಿ ವೆಚ್ಚದ ಸಭಾಮಂಟಪಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ರಾಜ್ಯ ಸರ್ಕಾರದಿಂದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಜೀವಕಳೆ ತುಂಬಿದ್ದು ಕಿತ್ತೂರಿಗರ ಬಹುದಿನಗಳ ನಿರೀಕ್ಷೆಯ ಭವ್ಯ ಕಲಾಮಂಟಪವೊಂದು ಪ್ರಾಧಿಕಾರದಡಿಯಲ್ಲಿ ತಲೆ ಎತ್ತಲಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು. ಪ್ರಾಧಿಕಾರದಡಿಯಲ್ಲಿ ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಚೌಕಿಮಠದ ಬಳಿ ರೂ. 10 ಕೋಟಿಯ ವೆಚ್ಚದಲ್ಲಿ …

Read More »

ನದಾಫ ಪಿಂಜಾರ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಸ್ವಾಗತ ಆದರೆ ನಮ್ಮ ಬೇಡಿಕೆ ಪ್ರತ್ಯೇಕ ನಿಗಮ ಮಂಡಳಿ-ಮೀರಾಸಾಬ ನದಾಫ.!

ನದಾಫ ಪಿಂಜಾರ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಸ್ವಾಗತ ಆದರೆ ನಮ್ಮ ಬೇಡಿಕೆ ಪ್ರತ್ಯೇಕ ನಿಗಮ ಮಂಡಳಿ-ಮೀರಾಸಾಬ ನದಾಫ.! ಗೋಕಾಕ: ಸಿಎಮ್ ಬಸವರಾಜ ಬೊಮ್ಮಾಯಿಯವರು ಅಲ್ಪಸಂಖ್ಯಾತರಲ್ಲಿ ಅತೀ ಹಿಂದುಳಿದ ನದಾಫ ಪಿಂಜಾರ ಸಮಾಜಕ್ಕೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎಲ್ಲಾ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆ ಬಜೇಟನಲ್ಲಿ ನೀಡಿರುವದು ಸ್ವಾಗತಾರ್ಹವಾಗಿದೆ ಎಂದು ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದÀ ತಾಲೂಕ ಅಧ್ಯಕ್ಷ ಮೀರಾಸಾಬ ನದಾಫ ಹೇಳಿದರು. ಅವರು, ನಗರದಲ್ಲಿ ಶನಿವಾರದಂದು ಪತ್ರಿಕಾಗೊಷ್ಠಿ ನಡೆಸಿ …

Read More »

ಬೃಹದ್ವೃಕ್ಷ

ಬೃಹದ್ವೃಕ್ಷ ————— ‘ಸಣ್ಣದನ್ನು ಯೋಚಿಸಬೇಡ, ಬರೆಯಬೇಡ’- ಉಪದೇಶಿಸುತ್ತಲೇ ಬಂದಿದ್ದಾಳೆ ಮಗಳು; ಈಗ ನೋಡುತ್ತೇನೆ ಅಚ್ಚರಿ! ಬೃಹತ್ ವೃಕ್ಷವಾಗಿ ಬೆಳೆದು ನಿಂತಿದ್ದಾಳೆ ನನ್ನೆದುರೇ ಅವಳು!! ಡಾ. ಬಸವರಾಜ ಸಾದರ. — + —

Read More »