ಬೆಳಗಾವಿ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ
ಬೆಳಗಾವಿ :
ಬೆಂಗಳೂರಿನ ಐಎಫ್‌ಐಎಂ ಕಾನೂನು ಶಾಲೆಯು ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಬೆಳಗಾವಿಯ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಜೇತರಾಗಿ ಸಾಧನೆ ಮೆರೆದಿದ್ದಾರೆ. ದೇಶದಾದ್ಯಂತ 34 ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿ ಮತ್ತು ಬೆಳಗಾವಿಯ ಆರ್‌ಎಲ್ ಕಾನೂನು ಕಾಲೇಜು ನಡುವೆ ಫೈನಲ್ ಪಂದ್ಯ ನಡೆಯಿತು. ಆರ್ .ಎಲ್.ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ತನ್ವಿ ಕುಲಕರ್ಣಿ, ಮೋಹನ್ ಗೌಡ ಮತ್ತು ಜೈನಂ ಪೋರವಾಲ್ ಐಎಫ್ ಐಎಂ ನ ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆ 2023 ಅನ್ನು ಗೆದ್ದರು. ಟ್ರೋಫಿ ಮತ್ತು ರೂ 60,000 ನಗದು ಬಹುಮಾನದೊಂದಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಅನಂತ ಮಂಡಗಿ, ಕರ್ನಾಟಕ ಕಾನೂನು ಸಂಸ್ಥೆಯ ಚೇರಮನ್ ಪಿ.ಎಸ್. ಸಾಹುಕಾರ್, ಕರ್ನಾಟಕ ಕಾನೂನು ಸಂಸ್ಥೆಯ ಆರ್.ಎಲ್.ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಮೂಟ್ ಕೋರ್ಟ್ ಸಂಯೋಜಕಿ, ಪ್ರಾಧ್ಯಾಪಕಿ ಅಶ್ವಿನಿ ಪರಬ್ ಸೇರಿದಂತೆ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.
Students of KLS Raja Lakhamgouda Law College won the National Level Moot Court Competition at Bengaluru
Belagavi: IFIM Law School, Bengaluru had organized a National Level Moot Court Competition. More than 34 teams across the country had participated in the Competition. The final was between Christ University, Bangalore and RL law College, Belagavi. Students of R L law College Tanvi Kulkarni, Mohan Gowda and Jainam Porwal. won the IFIM’s National Level Moot Court Competition, 2023 and were awarded with a trophy and a cash prize of Rs 60,000.
Anant Mandgi, President Karnatak Law Society. P.S Sawkar, Chairman Karnatak Law Society. M.R Kulkarni, Chairman, Governing Council, R.L.Law College, Principal, Dr A. H. Hawaldar, Moot Court Coordinator Professor Ashwini Parab and all staff members and students congratulated the team on this success.