ಹಪ್ಸಾ ಕಲಾದಗಿಗೆ ಪ್ರಶಸ್ತಿ ಪ್ರದಾನ!

ಯುವ ಭಾರತ ಸುದ್ದಿ ಕೊಲ್ಹಾರ : ಬಣ್ಣದಮನೆ ಸಾಂಸ್ಕೃತಿಕ ವೇದಿಕೆ, ಗದಗ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರು ಆಯೋಜಿಸಿದ್ದ ಚಿಣ್ಣರ ಚಿತ್ರ ಚಿತ್ತಾರ ಎಂಬ ರಾಜ್ಯ ಮಟ್ಟದ ಮಕ್ಕಳ ಚಿತ್ರ ಕಲೋತ್ಸವ ಸ್ಪರ್ಧೆಯಲ್ಲಿ ಪಟ್ಟಣದ ಸಿಕ್ಯಾಬ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಹಪ್ಸಾ ಎಚ್ ಕಲಾದಗಿ ಪುಟ್ಟ ಕಲಾವಿದೆ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಗದಗದ ಈಚೆಗೆ ನಡೆದ ಮಕ್ಕಳ ರಾಜ್ಯ ಮಟ್ಟದ ಕಲೋತ್ಸವದ ಚಿಣ್ಣರ ಚಿತ್ರ ಚಿತ್ತಾರ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸಚಿವರಾದ ಹಾಲಪ್ಪ ಆಚಾರ ಮತ್ತು ವಿಧಾನ ಪರಿಷತ್ ಸದಸ್ಯ ಹಾಗೂ ಈ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಎಸ್ ವಿ ಸಂಕನೂರ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ವಿದ್ಯಾರ್ಥಿನಿಯ ಈ ಸಾಧನೆಗೆ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ ಎಲ್ ಹೋನ್ಯಾಳ, ಪ್ರಾಂಶುಪಾಲರಾದ ಎಸ್ ಎಂ ಮನೂರ, ಚಿತ್ರಕಲಾ ಶಿಕ್ಷಕರಾದ ಎಸ್ ಎಂ ಡಾಂಗೆ ಹಾಗೂ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
YuvaBharataha Latest Kannada News