ಬಸವನಬಾಗೇವಾಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಈರಣ್ಣ ಬೆಕಿನಾಳ ಆಯ್ಕೆ!
ಯುವ ಭಾರತ ಸುದ್ದಿ ಬಸವನಬಾಗೇವಾಡಿ:
ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಡಿ.೨೫ ರಂದು ಜರುಗಲಿರುವ ಬಸವನಬಾಗೇವಾಡಿ ತಾಲೂಕಿನ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇಂಗಳೇಶ್ವರ ಗ್ರಾಮದ ಹಿರಿಯ ಸಾಹಿತಿ ಈರಣ್ಣ ಬೆಕಿನಾಳ ಅವರನ್ನು ಜಿಲ್ಲಾ ಕಸಾಪ ಹಾಗೂ ತಾಲೂಕು ಕಸಾಪ, ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ಇಂಗಳೇಶ್ವರದಲ್ಲಿರುವ ಅವರ ನಿವಾಸಕ್ಕೆ ತಹಸೀಲ್ದಾರ ಡಿ.ಎಚ್.ಕೋಮಾರ ನೇತೃತ್ವದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬಳಗ ಅಽಕೃತವಾಗಿ ಪತ್ರ ನೀಡುವ ಮೂಲಕ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಬೇಕೆಂದು ಆಮಂತ್ರಣ ನೀಡಿ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು.
ತಹಸೀಲ್ದಾರ ಡಿ.ಎಚ್.ಕೋಮಾರ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ತಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಯುವಜನಾಂಗಕ್ಕೆ ಮುಟ್ಟಿಸುವ ಕಾರ್ಯ ಮಾಡಬೇಕು. ಪ್ರಾತಿನಿಽಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ನಾಡಿನಲ್ಲಿ ಕನ್ನಡ ನುಡಿ,ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಸಮ್ಮೇಳನವನ್ನು ಎಲ್ಲರೂ ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಬೇಕೆಂದರು.
ಸಾಹಿತಿ ಈರಣ್ಣ ಬೆಕಿನಾಳ ಅವರು ಸರ್ವಾಧ್ಯಕ್ಷ ಸ್ಥಾನದ ಆಮಂತ್ರಣವನ್ನು ಸ್ವೀಕರಿಸಿದ ನಂತರ ಮಾತನಾಡಿ, ಸರ್ವಾಧ್ಯಕ್ಷ ಸ್ಥಾನಕ್ಕೆ ನನ್ನ ಸಾಹಿತ್ಯ ಸೇವೆ ಗುರುತಿಸಿ ಆಯ್ಕೆ ಮಾಡಿರುವದು ತುಂಬಾ ಸಂತಸ ತಂದಿದೆ. ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡು ಸಮ್ಮೇಳನದ ಯಶಸ್ವಿಗೆ ಸಹಕರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿ.ಬಿ.ಹಿರೇಮಠ, ಸಂಗಣ್ಣ ನಡಕಟ್ಟಿ, ಅರವಿಂದ ಕುಲಕರ್ಣಿ,ಸಿದ್ದಣ್ಣ ನಡಕಟ್ಟಿ, ಶಿವಾನಂದ ಮಂಗಾನವರ, ಕೆ.ಎಸ್.ಬಾಗೇವಾಡಿ, ಪ್ರಭಾಕರ ಖೇಡದ, ರವಿ ರಾಠೋಡ, ಶಿವು ಮಡಿಕೇಶ್ವರ, ಗಿರಿಜಾ ಸಜ್ಜನ, ಬೇಬಿ ಡಿಗ್ಗಾವಿ, ಯಮನಪ್ಪ ಮಿಣಜಗಿ, ಕೆ.ಎಸ್.ಅವಟಿ, ಬಸವರಾಜ ಮೇಟಿ, ವಿಶ್ವನಾಥ ಹಳ್ಳಿ, ಕೆ.ವೈ. ಬಾಗೇವಾಡಿ,ಕುಮಾರ ಬೆಕಿನಾಳ, ಬಸವರಾಜ ಹಂಚಲಿ, ಬಿ.ಎಸ್.ದಾನಿ, ಮಹೇಶ ಹದಿಮೂರ ಇತರರು ಇದ್ದರು