ಬೆಳಗಾವಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ಶಿಬಿರ ಯಶಸ್ವಿ
ಯುವ ಭಾರತ ಸುದ್ದಿ ಬೆಳಗಾವಿ :
ಕೆಎಲ್ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ಬಸವನ ಕುಡಚಿಯ ಶ್ರೀಮತಿ ಚೆನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದಲ್ಲಿ ಆಯೋಜಿಸಲಾಗಿತ್ತು.
ಮೊದಲ ದಿನ ಜೆಎನ್ ಎಂಸಿ ಸಾರ್ವಜನಿಕ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಎನ್ ಎಸ್ ಎಸ್ ಸಂಯೋಜಕಿ ಅಶ್ವಿನಿ ನರಸನ್ನವರ ಉದ್ಘಾಟಿಸಿ, ವೈಯಕ್ತಿಕ ಬೆಳವಣಿಗೆಯಲ್ಲಿ ಎನ್ಎಸ್ಎಸ್ ಕುರಿತು ಮಾತನಾಡಿದರು.
ಶ್ರೀಮತಿ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದ ಎಂ.ಎಸ್.ಚೌಗಲಾ ಅವರು, ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಬಗ್ಗೆ ತಿಳಿವಳಿಕೆ ನೀಡಿದರು. ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕ ಗಲಗಲಿ ಅವರು ವೃದ್ಧಾಶ್ರಮ ಮತ್ತು ಇಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾತನಾಡಿದರು. ಪ್ರಾಚಾರ್ಯ ಬಿ. ಜಯಸಿಂಹ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎರಡನೇ ದಿನದ ಎನ್ಎಸ್ಎಸ್ ಶಿಬಿರದಲ್ಲಿ ಬೆಳಗಾವಿಯ ಹೋಮೀಯೋಪತಿ ಕಾಲೇಜು ಮತ್ತು ಆಸ್ಪತ್ರೆಯಿಂದ ವೃದ್ಧಾಶ್ರಮದಲ್ಲಿರುವ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿ ಮೋಹನ ರೆಡ್ಡಿ ಅವರು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣದ ಅರಿವು ಮೂಡಿಸಿದರು.
ಮೂರನೇ ದಿನ ಪರಿಸರ ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂ ಸೇವಕರು ವೃದ್ಧಾಶ್ರಮದ ಸಂಪೂರ್ಣ ಆವರಣವನ್ನು ಅಚ್ಛುಕಟ್ಟಾಗಿ ಸ್ವಚ್ಛಗೊಳಿಸಿದರು.
ಶಿವಬಸವನಗರ ಡಾ. ಎಸ್.ಜಿ. ನಾಗಲೋಟಿಮಠ ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ ಅವರು ಮಾನವನ ಜೀವನದಲ್ಲಿ ಪರಿಸರದ ಮಹತ್ವ ಮತ್ತು ಪ್ಲಾಸ್ಟಿಕ್ ಮುಕ್ತ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದು ನಿಜವಾಗಿಯೂ ಬಃಳ ತಿಳುವಳಿಕೆ ನೀಡಿತು. ನಂತರ ಎರಡು ಕಿರುಚಿತ್ರಗಳನ್ನು ತೋರಿಸಲಾಯಿತು.
ನಾಲ್ಕನೇ ದಿನ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸುವ ಕುರಿತು ಅರಿವು ಮೂಡಿಸಲಾಯಿತು. ಸಸಿಗಳನ್ನು ನೆಡುವ ಬಗ್ಗೆ ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ನೀಡಲಾಯಿತು. ಸ್ವಯಂ ಸೇವಕರು 30 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಆವರಣವನ್ನು ಹಸಿರಿಕರಣ ಗೊಳಿಸಿದರು. ಹಿರಿಯ ನಾಗರಿಕರಿಗೆ ಮತ್ತು ಸ್ವಯಂ ಸೇವಕರಲ್ಲಿ ಪರಿಸರದ ಜಾಗೃತಿ ಮಂಡಿಸಲಾಯಿತು.
ಮಧ್ಯಾಹ್ನದ ಅಧಿವೇಶನದಲ್ಲಿ ಬಸವನ ಕುಡಚಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದ ಬ್ರಹ್ಮಕುಮಾರಿ ಬಿ. ಕೆ. ಅನುರಾಧಾ ಉಪನ್ಯಾಸ ನೀಡಿದರು. ಐದನೇ ದಿನ ವೃದ್ಧರು ಮತ್ತು ನಿರ್ಗತಿಕ ಮಹಿಳೆಯರಿಗೆ ಯೋಗ ಕಾರ್ಯಕ್ರಮ ಏರ್ಪಡಿಸಲಾಯಿತು.
ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಪ್ರಾಧ್ಯಾಪಕಿ ಡಾ. ರಿಚಾ ರಾವ್ ಯೋಗದ ಮೂಲಕ
ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ನ ತುಂಬಿದರು. ಸ್ವಯಂ ಸೇವಕರಿಗೆ ಯೋಗ ಕಲಿಸಿದರು. ಆಶ್ರಮದ ಪದಾಧಿಕಾರಿಗಳು ವೃದ್ಧರ ಕುರಿತು ಚಲನಚಿತ್ರ ಪ್ರದರ್ಶಿಸಿದರು.
ಆರನೇ ದಿನ ವಿಶ್ವ ಆಹಾರ ಸಂರಕ್ಷಣಾ ದಿನವನ್ನು ಆಚರಿಸಲಾಯಿತು. ಅನುಷಾ ಕುಲಕರ್ಣಿ ಅವರು ಆರೋಗ್ಯಕರ ಸುರಕ್ಷತಾ ಸಲಹೆಗಳು ಮತ್ತು ಆಹಾರದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಿಳಿ ಹೇಳಿದರು.
ಸ್ವಯಂ ಸೇವಕರು ಆಶ್ರಮದ ಸುತ್ತುಮುತ್ತನ ನಿವಾಸಿಗಳಿಗೆ ಹ್ಯಾಂಡ್ ಬಿಲ್ ಗಳನ್ನು ವಿತರಿಸಿದರು. ಉಚಿತ ಕಾನೂನು ಸಹಾಯದ ಬಗ್ಗೆ ನಿವಾಸಿಗಳಿಗೆ ಅರಿವು ಮೂಡಿಸಿದರು. ಸೀಮಾ ಕುಲಕರ್ಣಿ ಮತ್ತು ತಂಡದವರಿಂದ ಸಂಗೀತ ಮತ್ತು ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಏಳನೇ ದಿನ ವಿಶೇಷ ಶಿಬಿರವನ್ನು ಸಮರ್ಪಣಾ ಕಾರ್ಯದೊಂದಿಗೆ ಮುಕ್ತಾಯಗೊಳಿಸಲಾಯಿತು. ಶ್ರೀಮತಿ ಚಿನ್ನಮ್ಮಾ ಬಸವಂತಯ್ಯಾ ಹಿರೇಮಠ ವೃದ್ಧಾಶ್ರಮದ ಮುಖ್ಯಸ್ಥ ಎಂ.ಎಸ್.
ಚೌಗಲಾ ಹಾಗೂ ಗಲಗಲಿ ಗೌರವ ಅತಿಥಿಯಾಗಿ ಆಗಮಿಸಿದ್ದರು. ಗಲಗಲಿ ಅವರು ಗ್ರಾಹಕ ಮಾಹಿತಿ ಕೇಂದ್ರದಲ್ಲಿ ಗ್ರಾಹಕರಿಗೆ ಲಭ್ಯವಿರುವ ಪ್ರಯೋಜನಗಳ ಕುರಿತು ಮಾತನಾಡಿದರು. ಪ್ರಾಚಾರ್ಯ ಡಾ. ಬಿ. ಜಯಸಿಂಹ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್ ಎಸ್ ಎಸ್ ಸಂಯೋಜಕ ಶ್ರೀನಿವಾಸ ಪಾಲಕೊಂಡ, ಸಹಾಯಕಿ ಪ್ರಾಧ್ಯಾಪಕರಾದ ಉಮಾ ಹಿರೇಮಠ, ಜ್ಯೋತಿ ಹಿರೇಮಠ, ಸವಿತಾ ಪಟ್ಟಣಶೆಟ್ಟಿ, ಸುಪ್ರಿಯಾ ಸ್ವಾಮಿ, ಅಶ್ವಿನಿ ಹಿರೇಮಠ, ಮಂಜುನಾಥ ಅಲ್ಲಪ್ಪನ್ನವರ, ರಾಜಶ್ರೀ ಪಾಟೀಲ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.