Breaking News

ಅಧಿವೇಶನದಲ್ಲಿ ಪ್ರಸ್ತಾಪವಾಯ್ತು ಬೆಳಗಾವಿ ವಿವಾದ

Spread the love

ಅಧಿವೇಶನದಲ್ಲಿ ಪ್ರಸ್ತಾಪವಾಯ್ತು ಬೆಳಗಾವಿ ವಿವಾದ

ಯುವ ಭಾರತ ಸುದ್ದಿ ದೆಹಲಿ/ನಾಗಪುರ :
ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು ಬೆಳಗಾವಿ ಗಡಿ ವಿವಾದ ಸಂಬಂಧ ಮಹಾರಾಷ್ಟ್ರಗರು ತಕರಾರು ಎಬ್ಬಿಸಿದ್ದಾರೆ. ಲೋಕಸಭೆಯಲ್ಲಿ ಶಿವಸೇನೆ ಸಂಸದ ಅರವಿಂದ ಸಾವಂತ್ ಕರ್ನಾಟಕ ವಿರುದ್ಧ ಎಂದಿನಂತೆ ಆರೋಪ ಮಾಡಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ಎಂಇಎಸ್ ಪ್ರತಿಭಟನೆ ನಡೆಸುತ್ತದೆ. ಆದರೆ ಪ್ರತಿಭಟನಾಕಾರರ ಮೇಲೆ ಕರ್ನಾಟಕ ದೌರ್ಜನ್ಯ ಎಸಗಿದೆ ಎಂದು ದೂರಿದ್ದಾರೆ. ಪ್ರತಿಭಟನಾಕಾರರು ಪೆಂಡಾಲ್ ಗೆ ಹಾನಿ ಮಾಡಲಾಗಿದೆ ಮತ್ತು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಂವಿಧಾನಕ್ಕೆ ಗೌರವ ಕೊಡುತ್ತಿಲ್ಲ. ಮಹಾರಾಷ್ಟ್ರದ ಯಾವುದೇ ನಾಯಕರು ಕರ್ನಾಟಕ ಪ್ರವೇಶಿಸಲು ಬಿಡುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದಲ್ಲೂ ಚರ್ಚೆ :
ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ಇಂದು ನಾಗಪುರದಲ್ಲಿ ಆರಂಭವಾಗಿದೆ, ಮೊದಲ ದಿನವೇ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಸಂಬಂಧ ಚರ್ಚೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಅನ್ಯಾಯ ನಡೆಯುತ್ತಿದೆ ಎಂದು ಅನೇಕ ಸದಸ್ಯರು ಹರಿಹಾಯ್ದರು. ನಾಗಪುರ ಅಧಿವೇಶನದಲ್ಲಿ ಮರಾಠಿ ಭಾಷಿಕ ಪ್ರದೇಶಗಳನ್ನು ಮತ್ತೆ ವಿಶಾಲ ಮಹಾರಾಷ್ಟ್ರಕ್ಕೆ ಸೇರಿಸುವ ಕುರಿತ ಗೊತ್ತುವಳಿಯನ್ನು ಅಂಗೀಕರಿಸುವ ಸಾಧ್ಯತೆ ಇದೆ.

ಲೋಕಸಭಾ ಸದಸ್ಯರು ಬೆಳಗಾವಿಗೆ ಹೋಗದಂತೆ ಕರ್ನಾಟಕ ಸರಕಾರದವರು ತಡೆದರು, ಚುನಾಯಿತ ಪ್ರತಿನಿಧಿಗಳನ್ನು ಹೋಗದಂತೆ ನಿಲ್ಲಿಸುವುದು ಹೇಗೆ ಎಂದು ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್
ಪ್ರಶ್ನಿಸಿದರು.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರೂ ಇದು ನಡೆದಿದೆ. ಚುನಾಯಿತ ಪ್ರತಿನಿಧಿಯನ್ನು ಎಲ್ಲಿಯೂ ಹೋಗದಂತೆ ತಡೆಯುವುದು ಹೇಗೆ? ಎಂದು ಪವಾರ್ ಹೇಳಿದರು.
ಶಿವಸೇನೆಯ ಸಂಸದ ಧೈರ್ಯಶೀಲ ಮಾನೆಗೆ ಬೆಳಗಾವಿ ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧ ಹೇರಿತ್ತು.

ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸೋಮವಾರ ಬೆಳಗಾವಿಯಲ್ಲಿ ನಡೆಸಲಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಹಾತಕಣಂಗಲೆ ಕ್ಷೇತ್ರದ ಲೋಕಸಭಾ ಸದಸ್ಯ ಧೈರ್ಯಶೀಲ ಮಾನೆ ಅವರು ಅನುಮತಿ ಕೋರಿದ್ದರು. ಆದರೆ, ಕರ್ನಾಟಕ ಅವರಿಗೆ ನಿರ್ಬಂಧ ಹೇರಿತ್ತು.

ಠಾಕ್ರೆ ನೇತೃತ್ವದ ಶಿವಸೇನೆಯ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಮಾತನಾಡಿ, ಬೆಳಗಾವಿಯಲ್ಲಿ ಎಂಇಎಸ್ ನವರು ಸಭೆ ನಡೆಸುತ್ತಿದ್ದರು. ಆದರೆ ಅವರನ್ನೂ ಬಂಧಿಸಲಾಯಿತು. ಸಂಸದ ಮಾನೆ ಅವರನ್ನು ಅಲ್ಲಿಗೆ ಹೋಗದಂತೆ ಏಕೆ ತಡೆಯಲಾಯಿತು ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಮಹಾರಾಷ್ಟ್ರವನ್ನು ವಿಭಜಿಸಲು ಯೋಜಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರವು ಮಹಾರಾಷ್ಟ್ರವನ್ನು ವಿಭಜಿಸಲು ಯೋಜಿಸಿದೆ ಮತ್ತು ಕೇಂದ್ರದ ಆಶೀರ್ವಾದದಿಂದ ಕರ್ನಾಟಕದ ಸಮಸ್ಯೆಯನ್ನು ಮುನ್ನೆಲೆಗೆ ತರಲಾಗಿದೆ ಎಂದು ನಾನಾ ಪಟೋಳೆ ಆರೋಪಿಸಿದರು.

ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಸಂದಿಗ್ಧತೆಯಲ್ಲಿದ್ದು, ಶಿವಾಜಿ ಕುರಿತು ರಾಜ್ಯಪಾಲ ಕೊಶ್ಯಾರಿ ಅವರ ಅವಹೇಳನಕಾರಿ ಹೇಳಿಕೆಯನ್ನು ಬಿಜೆಪಿ ಎದುರಿಸುತ್ತಿರುವ ಸಮಯದಲ್ಲಿ ಮಹಾರಾಷ್ಟ್ರ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಾಗಪುರದಲ್ಲಿ ಇಂದು ಆರಂಭವಾಗಿದೆ . ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಕಳೆದ ಎರಡು ವರ್ಷಗಳಿಂದ ನಾಗ್ಪುರದಲ್ಲಿ ಅಧಿವೇಶನ ನಡೆಸಲು ಸಾಧ್ಯವಾಗಲಿಲ್ಲ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

16 − 13 =