ಬೆಳಗಾವಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ರೂ .3,50,000 ಮೌಲ್ಯದ 8 ಕಳುವಾದ ಮೋಟರ್ ಸೈಕಲ್ ವಶ
ಯುವ ಭಾರತ ಸುದ್ದಿ ಬೆಳಗಾವಿ :
ದಿನಾಂಕಃ 06/04/2023 ರಂದು ಬೆಳಗಾವಿ ಗ್ರಾಮೀಣ ಹದ್ದಿಯ ಕಮಲನಗರ ಗ್ರಾಮದ ಫಾಲ್ಟ್ರಿಫಾರ್ಮ್ ಮುಂದೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ನೀಡಿದ ದೂರಿನಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು . ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅರುಣ ಮುರಗುಂಡಿ , ಪಿಐ ಬೆಳಗಾವಿ ಗ್ರಾಮೀಣ ಅವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರ ತಂಡ ಸಂಶಯುಕ್ತ ಆರೋಪಿತನಾದ ಪರಶುರಾಮ ಸಣ್ಣಭೀಮಪ್ಪ ಕುರಲಿ ( 28 ) ಸಾಃ ಕಮಲನಗರ ಪೋಸ್ಟ್ ದೇಸೂರ ತಾಃಜಿಃ ಬೆಳಗಾವಿ ಇವನನ್ನು ವಶಕ್ಕೆ ಪಡೆದು , ವಿಚಾರಣೆ ಕೈಕೊಂಡು , ಆರೋಪಿತನಿಂದ ಮೋಟಾರು ಸೈಕಲ್‌ಗಳ ನಂಬರ್ ಪ್ಲೇಟಗಳನ್ನು ಹಾನಿಗೊಳಿಸಿರುವ ಒಟ್ಟು ರೂ .3,50,000 / – ಮೌಲ್ಯದ 08 ಮೋಟಾರ ಸೈಕಲ್‌ಗಳನ್ನು ( 01 ಹಿರೋ ಎಚ್‌ಎಫ್ ಡಿಲಕ್ಸ್ , 05 – ಹಿರೋಹೊಂಡಾ ಸ್ಪೈಂಡರ್ , 01 – ಪಲ್ಸರ್ ಬೈಕ್ ( 220 ) , 01 – ಫ್ಯಾಶನ್ ಪ್ಲಸ್ ) ವಶಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ , ತನಿಖೆ ಮುಂದುವರೆಸಲಾಗಿದೆ . ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಬೆಳಗಾವಿ ಗ್ರಾಮೀಣ ಠಾಣೆಯ ಪಿಐ , ಪಿಎಸ್‌ಐ ಹಾಗೂ ಸಿಬ್ಬಂದಿಯವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು , ಬೆಳಗಾವಿ ನಗರ ಮತ್ತು ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ .
ಕ್ಯಾಂಪ್ ಪೊಲೀಸ್ ಠಾಣೆಯವರ ಕಾರ್ಯಾಚರಣೆ : ರೂ .35,500 / – ಮೌಲ್ಯದ 474 ಗ್ರಾಂ ಗಾಂಜಾ ವಶ :
ದಿನಾಂಕಃ 10/04/2023 ರಂದು ಹದ್ದಿಯ ಗಣೇಶಪುರ ಜ್ಯೋತಿ ನಗರ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಂತೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಚಿಕೇತ ಎಸ್. ಜನಗೌಡ , ಪಿಐ ಕ್ಯಾಂಪ್ ಪೊಲೀಸ್ ಠಾಣೆ ಅವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ಆರೋಪಿತರಾದ 1 ) ನದೀಮ ಅಲ್ಲಾವುದ್ದಿನ್ ನದಾಫ್ ( 23 ) ಸಾ : ಜಯನಗರ ಮಚ್ಚೆ, ಬೆಳಗಾವಿ , 2 ) ಮನೀಶ ಮಾರುತಿ ಹುಂದ್ರೆ ( 23 ) ಸಾ : ಕಲಮೇಶ್ವರ ನಗರ ಹಿಂಡಲಗಾ ಬೆಳಗಾವಿ . ಇವರನ್ನು ವಶಕ್ಕೆ ಪಡೆದು , ವಿಚಾರಣೆ ಕೈಕೊಂಡು , ಆರೋಪಿತರಿಂದ ಒಟ್ಟು ರೂ .35,500 / – ಮೌಲ್ಯದ 474 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಿ , ತನಿಖೆ ಮುಂದುವರೆಸಲಾಗಿದೆ . ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕ್ಯಾಂಪ್ ಠಾಣೆಯ ಪಿಐ ಹಾಗೂ ಸಿಬ್ಬಂದಿಯವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು , ಬೆಳಗಾವಿ ನಗರ ಮತ್ತು ಡಿಸಿಪಿ ಶ್ಲಾಘಿಸಿರುತ್ತಾರೆ.