ಯುವ ಭಾರತ ಸುದ್ದಿ ಗೋಕಾಕ್: ಬೆಳಗಾವಿಯ ಪಿರಣವಾಡಿ ಗ್ರಾಮದಲ್ಲಿ ವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಗುರುವಾರ ನಡೆಯುವ ಅಧಿಕಾರಿಗಳ ಸಭೆಯಲ್ಲಿ ನಿರ್ಣಯವಾಗಿ ಆದಷ್ಟು ಬೇಗ ಮೂರ್ತಿ ಪ್ರತಿಷ್ಠಾಪನೆಯಾಗುವ ಆಶಾಭಾವನೆ ಇದೆ ಎಂದು ಮಾಜಿ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು, ಬುಧವಾರದಂದು ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸಂಗೊಳ್ಳಿ ರಾಯಣ್ಣ ಮೂರ್ತಿ ವಿವಾದವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಸೌಹಾರ್ದಯುತವಾಗಿ ಬಗೆ ಹರಿಸುವ ಭರವಸೆ ನೀಡಿದ್ದು, ಆದಷ್ಟು ಬೇಗ ಈ ಸಮಸ್ಯೆ ಬಗೆಹರಿದು ಪೀರಣವಾಡಿ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯಾಗುವ ಹೊಂದಿರುವದಾಗಿ ತಿಳಿಸಿದರು.
ಹಾಲು ಮತ ಸಮಾಜ ಭಾಂದವರು ಹಾಗೂ ವೀರ ಸಂಗೋಳ್ಳಿ ರಾಯಣ್ಣನ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಮಾಡಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ನಡೆಯಲಿರುವ ಹಾಲುಮತ ಸಮಾಜದ ಮುಖಂಡರು, ಪೀರಣವಾಡಿ ಗ್ರಾಮಸ್ಥರು, ಸಂಗೋಳ್ಳಿ ರಾಯಣ್ಣ ಅಭಿಮಾನಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಸಾಧಕ ಬಾಧಕಗಳ ಚರ್ಚೆಯಾಗಿ ಆದಷ್ಟು ಬೇಗ ಮೂರ್ತಿಪ್ರತಿಷ್ಠಾಪನೆಯಾಗುವ ವಿಶ್ವಾಸವಿದೆ. ತಮ್ಮ ಹೋರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಹರಿಸಬೇಕೆಂದು ಸಣ್ಣಕ್ಕಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಡ್ಡೆಪ್ಪ ತೋಳಿನವರ, ಮುಖಂಡರುಗಳಾದ ಲಕ್ಷö್ಮಣ ಚಂದರಗಿ, ಲಖನ್ ಚಂದರಗಿ ಉಪಸ್ಥಿತರಿದ್ದರು.