ಡಿಸಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ ಪೀರನವಾಡಿ ವಿವಾದಕ್ಕೆ ಸೌಹಾರ್ದತೆಯ ತೆರೆ ಬಿದ್ದಿದೆ…
ಎಡಿಜಿಪಿ ಅಮರಕುಮಾರ್ ಪಾಂಡೆ ನಡೆಸಿದ, ಸಂಧಾನಸಭೆ ಸಕ್ಸಸ್..!!
ಯುವ ಭಾರತ ಸುದ್ದಿ, ಬೆಳಗಾವಿ: ಜಿಲ್ಲೆಯ ಪೀರನವಾಡಿ ಗ್ರಾಮದ ಸರ್ಕಲ್ ಬಳಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಈಗ ಅಂತ್ಯಗೊಂಡಿದ್ದು ಎ.ಡಿ.ಜಿ.ಪಿ ಅಮರಕುಮಾರ್ ಪಾಂಡೆ ನೇತೃತ್ವದಲ್ಲಿ ಇಂದು ಬಗೆಹರೆದಿದೆ.
ಅಮರಕುಮಾರ್ ಪಾಂಡೆ ಇಂದು ಕನ್ನಡಪರ ಸಂಘನೆಗಳು ಮತ್ತು ಮರಾಠಿ ಸಂಘಟನೆಯ ಮುಖಂಡರ ಮದ್ಯೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಇವರ ಮಾತಿಗೆ ಎರಡು ಸಂಘಟನೆಯವರು ಒಪ್ಪಿದ್ದು ವೃತದಲ್ಲೆ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡುವುದು. ಮತ್ತು ವೃತ್ತಕ್ಕೆ ಶಿವಾಜಿ ಮಹಾರಾಜರ ಹೆಸರು ಇಡಲು ಎರಡು ಸಂಘಟನೆಯವರು ಒಪ್ಪಿದ್ದರಿಂದ ಕಳೆದ ಮೂರು ವರುಷಗಳಿಂದ ನಡೆದ ಹೋರಾಟ ಅಂತ್ಯಕಂಡಿದೆ. ಸಭೆಯಲ್ಲಿ ಕನ್ನಡ ಸಂಘಟನೆ ನಾಯಕ ದೀಪಕ್ ಗುಡಗನಟ್ಟಿ ಮರಾಠ ನಾಯಕರು ಸೇರಿ ಅನೇಕ ಮುಖಂಡರು ಬಾಗಿಯಾಗಿದ್ದರು.
ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು ಪ್ರಸ್ತಾಪವಾಗಿ ವಿವಾದಕ್ಕೆ ಬಹುತೇಕ ತೆರೆಬಿದ್ದಿದೆ.
ರಾಯಣ್ಣ ಅಭಿಮಾನಿಗಳು ಪ್ರತಿಷ್ಠಾಪಿಸಿದ ಸ್ಥಳದಲ್ಲೇ ರಾಯಣ್ಣ ಪ್ರತಿಮೆ ಇರಲು ಮರಾಠಿ ಭಾಷಿಕರ ಒಪ್ಪಿಗೆ ಕೊಟ್ಟಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿದ ವೃತ್ತಕ್ಕೆ ‘ಶಿವಾಜಿ ವೃತ್ತ’ ಎಂದು ನಾಮಕರಣಕ್ಕೆ ಕನ್ನಡಪರ ಮುಖಂಡರ ಒಪ್ಪಿಗೆ ಸೂಚಿಸಿದ್ದಾರೆ,ಎಂದು ತಿಳಿದು ಬಂದಿದ್ದು ಕನ್ನಡ ಮತ್ತು ಮರಾಠಿ ಭಾಷಿಕರ ಜೊತೆ ನಡೆದ ಸಂಧಾನಸಭೆ ಸಫಲವಾಗಿದೆ.
ಡಿಸಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೀರನವಾಡಿ ವಿವಾದಕ್ಕೆ ಸೌಹಾರ್ದತೆಯ ತೆರೆ ಬಿದ್ದಿದೆ.