ಶಿವಾಜಿ ಮತ್ತು ರಾಯಣ್ಣನನ್ನು ಅಪ್ಪಿಕೊಂಡ ಬಿಜೆಪಿ ಸರ್ಕಾರ..!!
ಯುವ ಭಾರತ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಪೀರಣವಾಡಿ ಗ್ರಾಮದ ಮೂರ್ತಿ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಮಂತ್ರಿಗಳ ದಂಡು ಪೀರನವಾಡಿಗೆ ದೌಡಾಯಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ,ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ,ಅಬಕಾರಿ ಸಚಿವ ಎನ್ ನಾಗೇಶ ಅವರು ಇಂದು ಪೀರನವಾಡಿ ಗ್ರಾಮಕ್ಕೆ ಭೇಟಿ ನೀಡಿ,ರಾಷ್ಟ್ರ ಪುರುಷರಾದ ಛತ್ರಪತಿ ಶಿವಾಜಿ,ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿ ಗೌರವ ಸಮರ್ಪಿಸಿದರು.
ಪೀರನವಾಡಿಗೆ ತೆರಳುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ,ಶಿವಾಜಿ ರಾಯಣ್ಣ ಇಬ್ಬರೂ ರಾಷ್ಟ್ರಪುರುಷರಾಗಿದ್ದು ಇಬ್ಬರೂ ಮಹಾಪುರುಷರನ್ನು ಜಾತಿಗೆ ಸೀಮೀತಗೊಳಿಸಲು ಸಾಧ್ಯವಿಲ್ಲ.ನಾವು ಇಬ್ಬರಿಗೂ ಗೌರವ ಕೊಡುತ್ತೇವೆ.ರಾಯಣ್ಣ ಮತ್ರು ಶಿವಾಜಿ ಅಭಿಮಾನಿಗಳು ಶಾಂತಿ ಕಾಪಾಡಲು,ಸಂಪೂರ್ಣವಾಗಿ ಸಹಕಾರ ನೀಡಿದ್ದರಿಂದ ಸಮಸ್ಯೆ ಇತ್ಯರ್ಥಗೊಳಿಸಲು ಸಾಧ್ಯವಾಯಿತು ಎಂದರು
ಪೀರನವಾಡಿ ವಿವಾದಕ್ಕೆ ಸಮಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ,ರಾಯಣ್ಣನ ಮೂರ್ತಿಯನ್ನು ಅಧಿಕೃತ ಗೊಳಿಸುವ ಕುರಿತು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುತ್ತಾರೆ ಈ ಬಗ್ಗೆ ನಾನು ಮಾತನಾಡುವದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು
YuvaBharataha Latest Kannada News