ಶಾಸಕರ ಸ್ವಹಿತಾಸಕ್ತಿಗೆ ಬೇರೆ ಸಮುದಾಯದ ಅಧಿಕಾರಿಗಳು ಬಲಿಯಾಗಬೇಕೇ?
ಅಧಿಕಾರ ಸ್ವೀಕರಿಸದಂತೆ ಅಡ್ಡಗಾಲಾದ ಶಾಸಕರು..?
ಪ್ರಿತಮ್ ನಸಲಾಪುರೆ
ಶಾಸಕರ ಸ್ವಜಾತಿ ಪ್ರೇಮ ಇತರೆ ಅಧಿಕಾರಿಗಳಿಗೆ ಕಂಟಕ!
ಶಾಸಕರು
ಮಂಗಳೂರಿನಿಂದ ಬೆಳಗಾವಿಗೆ ವರ್ಗಾವಣೆ ಆದೇಶ.
ಬೆಳಗಾವಿ: ಜನಪ್ರತಿನಿಧಿಯೊಬ್ಬರು ಅಧಿಕಾರಿಗಳ ವರ್ಗಾವಣೆಯಲ್ಲಿ ಸ್ವಜಾತಿ ಪ್ರೇಮ ಮೆರೆದು ಬೇರೆ ಅಧಿಕಾರಿಗಳು ಅಧಿಕಾರ ಸ್ವೀಕರಿಸದಂತೆ ತಡೆಯುತ್ತಿರುವುದು ಈಗಿನ ಪ್ರಚಲಿತ ವಿದ್ಯಮಾನ.
ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಯೊಬ್ಬರು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರ ಸ್ವೀಕರಿಸಲು ಬರದಂತೆ ಹಾಗೂ ಅಲ್ಲಿಂದ ರಿಲೀವ್ ಆಗದಂತೆ ಶಾಸಕರು ಫೋನಾಯಿಸಿದ್ದು ಬೆಳಗಾವಿಯ ಒಂದು ಪ್ರಮುಖ ಸಮುದಾಯ ಕಿಚ್ಚು ಭುಗಿಲೇಳುವಂತೆ ಮಾಡಿದೆ.
ಮುಂಬರುವ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಮಹತ್ವದ ಹುದ್ದೆ ಸ್ವೀಕರಿಸಲಿರುವ ಈ ಶಾಸಕರು ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ದೂರದೃಷ್ಟಿತ್ವವನ್ನು ಹೊಂದಬೇಕೇ ಹೊರತು ಈ ಅಧಿಕಾರಿ ಬೇಡ ಆ ಅಧಿಕಾರಿ ಬೇಡ ಎಂಬ ತಾರತಮ್ಯ ನೀತಿಯನ್ನು ಬಿಟ್ಟು ಹಾಕಬೇಕು.
ಬುಡಾಕ್ಕೆ ಗೂಟ ಹಿಡಿದುಕೊಂಡ ಪ್ರೀತಮ್- ಪ್ರಿತಮ್ ನಸಲಾಪುರೆ ಅವರು ಕಿರಿಯ ಶ್ರೇಣಿವರಾಗಿದ್ದು, ಬುಡಾ ಆಯುಕ್ತರು ಆಗಲು ಬರುವುದೇ ಇಲ್ಲ. ಆದರೆ ಶಾಸಕರೊಬ್ಬರ ಸ್ವಹಿತಾಸಕ್ತಿ , ಸ್ವಜಾತಿ ಪ್ರೇಮದಿಂದ ಅಕ್ರಮವಾಗಿ ಮೂರು ವರ್ಷಗಳಿಂದ ಅಧಿಕಾರದಿಂದ ಮುಂದುವರೆದಿದ್ದಾರೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾದಿಕಾರದ ಆಯುಕ್ತ ಪ್ರಿತಮ್ ನಸಲಾಪುರೆ ಅವರು ತಮ್ಮ ಕುರ್ಚಿಗೆ ಅಂಟಿಕೊಂಡಿದ್ದು ವರ್ಗಾವಣೆ ಆದರು ಬಿಟ್ಟುಕೊಡುತ್ತಿಲ್ಲ. ಇದರ ಹಿಂದೆ ಕಾಣದ ಕೈಗಳು ಕಾಣಿಸುತ್ತಿವೆ.
ಮಂಗಳೂರಿನಿಂದ ಬೆಳಗಾವಿಗೆ ವರ್ಗಾವಣೆ ಆಗಿ ಬಂದಿರುವ ದಿನೇಶಕುಮಾರ ಜಿ.ಟಿ ಅವರು ಕೆಎಎಸ್ ಹಿರಿಯ ಶ್ರೇಣಿವರಾಗಿದ್ದು, ಬೆಳಗಾವಿಯಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಭೂಸ್ವಾಧಿನ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಅವರು ಉತ್ತಮ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರಿಂದಲೇ ಅವರಿಗೆ “ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ” ಕೂಡ ಬೆಳಗಾವಿಯಲ್ಲಿಯೇ ದೊರೆತಿದ್ದು. ಅದನ್ನು ಆ ಶಾಸಕರು ಅರಿಯಬೇಕು.
ಪ್ರತಿಭಟನೆಯ ಎಚ್ಚರಿಕೆ: ಈ ಹಿಂದೆ ಎಂಜಿನಿಯರ್, ಉದ್ಯಮಿ, ಪ್ರಮುಖ ಆಯಕಟ್ಟಿನ ಅಧಿಕಾರಿಗಳಿಗೆ ಹೆದರಿಸಿ ಬೆದರಿಸಿ ಕಪಾಳಮೋಕ್ಷ ಹಾಗೂ ವರ್ಗಾವಣೆ ಮಾಡಿಸಿರುವ ಈ ಶಾಸಕರು ಈಗಲೂ ಬದಲಾಗದೆ ಬರುವ ಅಧಿಕಾರಿಗಳನ್ನು ಹೆದರಿಸುವ ಕಾರ್ಯಕ್ಕೆ ಇಳಿದಿದ್ದಾರೆ. ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ ಒಂದು ಸ್ವತಂತ್ರವಾದ ಆಡಳಿತ ವ್ಯವಸ್ಥೆ ಇರುತ್ತವೆ. ಅದರ ಅರಿವು ಶಾಸಕರಿಗೆ ಇರಬೇಕು. ಎಲ್ಲಿಂದಲೂ ಯಾವುದೇ ಅಧಿಕಾರಿ ವರ್ಗಾವಣೆ ಆದಾಗ ಈ ರೀತಿಯ ಬೆದರಿಕೆ ಹಾಕುವುದು ಸರಿಯಲ್ಲ. ಅಧಿಕಾರಿಗಳ ಬರುವಿಕೆ ತಡೆದರೆ ಬೆಳಗಾವಿಯಲ್ಲಿ ಎಲ್ಲ ಹಿಂದುಳಿದ ಸಮುದಾಯ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ.
ಒಟ್ಟಾರೆ ಸ್ವಜಾತಿ ಸ್ವ ಹಿತಾಸಕ್ತಿ ಮೆರೆಯುವ ಶಾಸಕರು
ತಾವು ತಮ್ಮ ಸಮುದಾಯದ ಅಧಿಕಾರಿಗಳನ್ನು ಉಳಿಸಲು ಮಾಡುವ ಸ್ವಜಾತಿ ಪ್ರೇಮ ನಾವೇಕೆ ಮಾಡಬಾರದು? ಎಂದು ಬೆಳಗಾವಿ ಜಿಲ್ಲೆಯ ಪ್ರಮುಖ ಹಿಂದುಳಿದ ಸಮುದಾಯ ಮುಖಂಡರ ಮಿಲಿಯನ ಡಾಲರ್ ಪ್ರಶ್ನೆ.