ಸುಳೇಭಾವಿ ದೇವಿಯ ಹಡ್ಡಲಗಿ ತುಂಬಿ ಕಾರ್ಯಕ್ರಮ ಸಂಪನ್ನ!!
ಯುವ ಭಾರತ ಸುದ್ದಿ ಬೆಳಗಾವಿ: ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ಗುಡ್ಡಕ್ಕೆ ತೆರಳಿದ್ದ ಸುಳೇಭಾವಿ ಗ್ರಾಮದ ಭಕ್ತರು ಮಂಗಳವಾರ ಕರಡಿಗುದ್ದಿ ಗ್ರಾಮದಲ್ಲಿ ಪಡ್ಡಲಗಿ(ಹಡ್ಡಲಗಿ) ತುಂಬುವ ಮೂಲಕ ಗ್ರಾಮಕ್ಕೆ ಮರಳಿ ಕಾರ್ಯಕ್ರಮ ಸಂಪನ್ನಗೊಸಿದರು.
ಒಂಭತ್ತು ದಿನಗಳ ಕಾಲ ಸುಳೇಭಾವಿ ಗ್ರಾಮದಿಂದ ಯಲ್ಲಮ್ಮನ ಗುಡ್ಡಕ್ಕೆ ಪರಿಷೆ ತೆರಳಿದ್ದ ಭಕ್ತರು ಮಂಗಳವಾರ ಸ್ವಗ್ರಾಮಕ್ಕೆ ವಾಪಸ್ಸಾದರು. ಯಲ್ಲಮ್ಮನ ಗುಡ್ಡದಕ್ಕೆ ಚಕ್ಕಡಿ, ಟ್ರಾö್ಯಕ್ಟರ್, ಟೆಂಪೋಗಳ ಮೂಲಕ ತೆರಳಿದ್ದರು. 9ನೇ ದಿನಕ್ಕೆ ಕರಡಿಗುದ್ದಿ ಗ್ರಾಮದಲ್ಲಿ ಇದ್ದುಕೊಂಡು ಶ್ರೀ ಕೊಂಡಕೇರಿ ಎಂಬ ದೇವನರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದ ಭಕ್ತರ ಸಾಮೂಹಿಕ ಪಡ್ಡಲಗಿ ತುಂಬುವ ಕಾರ್ಯಕ್ರಮ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ರೊಟ್ಟಿ, ಪಲ್ಯೆ, ಮೊಸರಣ್ಣ ಸಏರಿದಂತೆ ವಿವಿಧ ಭಕ್ಷö್ಯ ಭೋಜನದ ಪಡ್ಡಲಗಿ ತುಂಬಲಾಯಿತು. ನಂತರ ಚಕ್ಕಡಿಗ, ವಾಹನಗಳ ಮೂಲಕ ಭಕ್ತರು ಸಂಜೆ ಹೊತ್ತಿಗೆ ಗ್ರಾಮಕ್ಕೆ ಮರಳಿದರು.
ಸುಳೇಭಾವಿ ಗ್ರಾಮದ ಸೀಮೆಯಲ್ಲಿರುವ ಬಂಡೆವ್ವ ದೇವರ ಬಳಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಗ್ರಾಮದ ಒಳಗೆ ಪ್ರವೇಶ ಪಡೆದರು.
ಗ್ರಾಮದ ಶ್ರೀ ಯಲ್ಲಮ್ಮ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಪರಿಷೆ ಸಂಪನ್ನಗೊಂಡಿತು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಸದಸ್ಯರು, ಗ್ರಾಮದ ಹಿರಿಯರಾದ ಬಸನಗೌಡ ಹುಂಕರಿಪಾಟೀಲ ಮಾತನಾಡಿ, 9 ದಿನಗಳ ಕಾಲ ಪಾದಯಾತ್ರೆ ನಡೆಸುತ್ತ ಚಕ್ಕಡಿ, ವಾಹನಗಳಲ್ಲಿ ,ಭಕ್ತರು ಪ್ರಯಾಣ ಬೆಳೆಸಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿದ್ದರು. ಈಗ 9ನೇ ದಿನ ಗ್ರಾಮಕ್ಕೆ ಮರಳಿ ಬರಲಾಯಿತು. ಯಲ್ಲಮ್ಮ ದೇವಿಯನ್ನು ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆದುಕೊಂಡು ಬರಲಾಯಿತು. ಕರಡಿಗುದ್ದಿ ಗ್ರಾಮದಲ್ಲಿ ಪಡ್ಡಲಗಿ ತುಂಬಿ ಸಂಜೆ ಆಕಾಶದಲ್ಲಿ ನಕ್ಷತ್ರಗಳು ಕಂಡ ಬಳಿಕ ಗ್ರಾಮಕ್ಕೆ ಮರಳುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು ಎಂದು ಹೇಳಿದರು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೇನ್ನವರ ಮಾತನಾಡಿ, ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾಥ್ರಾ ಮಹೋತ್ಸವದಂತೆಯೇ ಯಲ್ಲಮ್ಮನ ಗುಡ್ಡಕ್ಕೆ ಐದು ವರ್ಷಕ್ಕೆ ಒಮ್ಮೆ ಹೋಗುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಬಾರಿಯೂ ಅತ್ಯಂತ ವಿಜೃಂಭಣೆಯಿAದ ಕಾರ್ಯಕ್ರಮ ನೆರವೇರಿಸಲಾಗಿದೆ. ಸುಳೇಭಾವಿ ಗ್ರಾಮದ ಭಕ್ತರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪಾಳ್ಗೊಂಡು ಜಾತ್ರೆ ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಸದಸ್ಯರು, ಶ್ರೀ ಮಹಾಲಕ್ಷ್ಮಿ ಹಾಗೂ ಯಲ್ಲಮ ದೇವಿಯ ಪೂಜಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.