||ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್..!!
ಯುವ ಭಾರತ ಸುದ್ದಿ ಬೆಳಗಾವಿ : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಅಮಿತ್ ಪಾವಲೆ (35) ಎಂಬಾತನ ಬಲಗೈ ಭುಜಕ್ಕೆ ಗುಂಡು ತಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಅಂಬೇವಾಡಿ ಗ್ರಾಮದಲ್ಲಿ ನೆಲೆಸಿರುವ ಕಾತ್ಸು ತರಳೆ (47) ಎಂಬಾತನಿಂದ ಈ ಕೃತ್ಯ ನಡೆದಿದೆ. ಗಾಯಾಳು ಅಮಿತ್, ಫೈರಿಂಗ್ ಮಾಡಿದ ಆರೋಪಿ ಕಾತ್ಸು ತರಳೆಯ ಸಹೋದರಿಯ ಪುತ್ರ. ಎರಡು ಕುಟುಂಬದ ನಡುವಿನ ಜಮೀನು ವಿವಾದ ಕೋರ್ಟ್‌ನಲ್ಲಿ ಇತ್ತೀಚೆಗೆ ಇತ್ಯರ್ಥಗೊಂಡಿತ್ತು.
ಅಮಿತ್ ಪಾವಲೆ ಪರ ತೀರ್ಪು ಬಂದಿತ್ತು. ಇದರಿಂದ ಕುಪಿತಗೊಂಡ ಕಾತ್ಸು ತರಳೆ, ಸೋದರಳಿಯ ಅಮಿತ್ ಮೇಲೆ ಫೈರಿಂಗ್ ಮಾಡಿ ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಅಮಿತ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
YuvaBharataha Latest Kannada News