ಗಡ್ಡೆ ಎರೆಹುಳು ತಯಾರಿಕಾ ಕೇಂದ್ರಕ್ಕೆ ಭೇಟಿ!!
ಬೆಳಗಾವಿ ಪಶು ಇಲಾಖೆಯ ಕೇಂದ್ರೀಯ ಗ್ರಾಮೀಣ ಜೀವನೋಪಾಯ ಅಧ್ಯಯನ ಯೋಜನೆಯಡಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಸಮೀಪದ ಕಣಬರ್ಗಿಯ ಗಡ್ಡೆ ಕುರಿ ಮತ್ತು ಮೇಕೆ ಸಾಕಾಣಿಕೆ ಕೇಂದ್ರ ಹಾಗೂ ಗಡ್ಡೆ ಎರೆಹುಳು ಗೊಬ್ಬರ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಯುವ ಭಾರತ ಸುದ್ದಿ ಬೆಳಗಾವಿ: ಪಶು ಇಲಾಖೆಯ ಕೇಂದ್ರೀಯ ಗ್ರಾಮೀಣ ಜೀವನೋಪಾಯ ಅಧ್ಯಯನ ಯೋಜನೆಯಡಿಯಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಸಮೀಪದ ಕಣಬರ್ಗಿಯ ಗಡ್ಡೆ ಕುರಿ-ಮೇಕೆ ಸಾಕಾಣಿಕೆ ಕೇಂದ್ರ ಹಾಗೂ ಗಡ್ಡೆ ಎರೆಹುಳು ಗೊಬ್ಬರ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಎರೆಹುಳು ಗೊಬ್ಬರ ತಯಾರಿಕಾ ಕೇಂದ್ರದ ಮುಖ್ಯಸ್ಥ, ಪ್ರಗತಿಪರ ರೈತ ನಾಗೇಶ ಗಡ್ಡೆ ಮಾತನಾಡಿ, ಈಗಿನ ಕಾಲದಲ್ಲಿ ಹೆಚ್ಚು ಇಳುವರಿ ಪಡೆಯುವ ಧಾವಂತದಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿಕೀಟನಾಶಕಗಳನ್ನು ಬಳಸಿ ಬಳಸಿ ಭೂಮಿಯನ್ನು ರೋಗಗ್ರಸ್ಥವನ್ನಾಗಿ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರ ಹಾಕಿ ಜಮೀನು ಕಾಂಕ್ರಿಟ್‌ನAತಾಗಿರುತ್ತದೆ. ಭೂಮಿಯಲ್ಲಿ ಕೈ ಹಾಕಿ ಹಿಡಿಮಣ್ಣು ತೆಗೆದುಕೊಳ್ಳಲು ಆಗುವುದಿಲ್ಲ. ಉಸಿರೇ ಆಡದ, ನೀರೇ ಇಳಿಯದ ಇಂತಹ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡಲು ಸಾಧ್ಯ ಇಲ್ಲ ಎಂದರು.
ಎರೆಹುಳುವನ್ನು ರೈತನ ಮಿತ್ರ, ಪ್ರಕೃತಿಯ ನೇಗಿಲು ಎಂದು ಕರೆಯಲಾಗುತ್ತದೆ. ಎರೆಹುಳುಗಳು ರೈತನಂತೆ ಹಗಲುರಾತ್ರಿ ಎನ್ನದೆ ನಿರಂತರವಾಗಿ ಭೂಮಿಯಲ್ಲಿ ದುಡಿಯುತ್ತಿರುತ್ತವೆ. ಕೆಳಭಾಗದ ಭೂಮಿಯ ಮಣ್ಣನ್ನು ಮೇಲಕ್ಕೆ ತಂದು ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಹಕರಿಸುತ್ತದೆ. ಎರೆಹುಳುಗಳು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ. ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಕೀಟಗಳ ಬಾಧೆಯಿಂದ ರಕ್ಷಣೆ ಹಾಗೂ ಬೆಳೆಗಳಿಗೆ ನಷ್ಟವನ್ನು ಕಡಿಮೆ ಮಾಡುತ್ತದೆ. ಬೆಳೆಗಳ ಉತ್ಪನ್ನಗಳು ಅತೀ ಉತ್ತಮ ಹಾಗೂ ಯೋಗ್ಯವಾಗಿದ್ದು, ಹೆಚ್ಚಿನ ರುಚಿ ಹೊಂದಿರುತ್ತವೆ. ಬೆಳೆಗಳು ಉತ್ತಮವಾಗಿದ್ದು ಹೆಚ್ಚಿನ ಬೆಲೆ ಪಡೆಯುತ್ತವೆ ಎಂದರು.
ಪಶು ಇಲಾಖೆಯಿಂದ ನಡೆಯುತ್ತಿರುವ ಈ ತರಬೇತಿ ಆರು ದಿನಗಳ ಕಾಲ ನಡೆದಿದ್ದು, ಒಟ್ಟು 30 ಮಹಿಳೆಯಯರನ್ನು ಪ್ರತಿ ಗ್ರಾಪಂನ ಮಹಿಳಾ ಸಂಘದಿAದ ತಲಾ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಕಣಬರ್ಗಿಯ ಗಡ್ಡೆ ಕುರಿ ಮತ್ತು ಮೇಕೆ ಸಾಕಾಣಿಕೆ ಕೇಂದ್ರ, ಗಡ್ಡೆ ಎರೆಹುಳು ಗೊಬ್ಬರ, ವರ್ಮಿ ವಾಶ್ ಕೇಂದ್ರಕ್ಕೆ ಭೇಟಿ ನೀಡಿದ ಅಭ್ಯರ್ಥಿಗಳು ಎರೆಹುಳು ಗೊಬ್ಬರ ತಯಾರಿಕೆ, ಬಳಕೆ, ಇದರ ಲಾಭ, ಕ್ರಿಮಿಕೀಟನಾಶಕಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ಪಡೆದರು. ಪಶು ಇಲಾಖೆ ಅಧಿಕಾರಿ ದುರ್ಗನ್ನವರ, ಮಹ್ಮದ ಅಲಿ ಹಾಗೂ ಆನಂದ ನೇತೃತ್ವ ವಹಿಸಿದ್ದರು.